    ಮೂಲದೊಡನೆ ಪರಿಶೀಲಿಸಿ

ಎಣ್ಣೆಗಳು, ಕೊಬ್ಬುಗಳು ಮತ್ತು ಮೇಣಗಳು

ಇತಿಹಾಸ ಪೂರ್ವ ಕಾಲದಿಂದ ಮಾನವ ಪ್ರಕೃತಿದತ್ತವಾದ ಕೊಬ್ಬನ್ನು ಆಹಾರ ಮತ್ತು ಇತರ ಉದ್ದೇಶಗಳಿಗಾಗಿ ಬಳಸುತ್ತಿದ್ದಾನೆ. ಕ್ರಿ.ಪೂ. 1400ರಲ್ಲಿಯೇ ಈಜಿಪ್ಟಿಯನ್ನರು ತಮ್ಮ ರಥಗಳು ಸರಾಗವಾಗಿ ಓಡುವಂತೆ ಮಾಡಲು ಗಾಲಿಯ ಕೀಲೆಣ್ಣೆಯಾಗಿ ಸವರುತ್ತಿದ್ದ ಬಗ್ಗೆ ಉಲ್ಲೇಖವಿದೆ. ಮೇಣದ ಬತ್ತಿ, ಎಣ್ಣೆ, ಜೇನುಮೇಣ ಮತ್ತು ಮೇದಸ್ಸುಗಳಿಂದ ದೀಪ ಉರಿಸುವುದು ಸಹಸ್ರಾರು ವರ್ಷಗಳಿಂದ ರೂಢಿಯಲ್ಲಿದೆ. ಬೇಗ ಒಣಗುವ ಎಣ್ಣೆಗಳಿಂದ ಗೋಡೆಗಳ ಅಲಂಕರಣ ಮತ್ತು ಹಡಗುಗಳ ಹೊರಭಾಗ ತೇವನಿರೋಧಕವಾಗುವಂತೆ ಮಾಡುವುದು ಮಾನವನಿಗೆ ಹಿಂದಿನಿಂದ ಪರಿಚಿತವಾಗಿದ್ದ ಕಲೆ. ಮೇಣ ಅಥವಾ ಎಣ್ಣೆಯನ್ನು ಬಣ್ಣದೊಂದಿಗೆ ಎಮಲ್ಷನ್ ಮಾಡಿ, ಸಸ್ಯ ಅಂಟುಗಳಿಂದ ಸ್ಥಿರಗೊಳಿಸಿ, ಪ್ರಾಚೀನ ಚಿತ್ರಕಲೆಯಲ್ಲಿ ಬಳಸುತ್ತಿದ್ದರು. ಇವು ಆಧುನಿಕ ಎಮಲ್ಷನ್ ಪೆಯಿಂಟುಗಳನ್ನು ಹೋಲುತ್ತಿದ್ದುವು. ಖಾದ್ಯ ಎಣ್ಣೆಗಳ ಸಂಸ್ಕರಣದಲ್ಲಿ ಬಹಳ ಸುಧಾರಣೆಗಳಾಗಿದ್ದರೂ ಇತರ ಕೊಬ್ಬುಗಳ ಬಳಕೆ ಶತಮಾನಗಳ ಹಿಂದೆ ಇದ್ದಂತೆಯೇ ಉಳಿದಿರುವುದು ವಿಶೇಷ ಸಂಗತಿ. ಅಲ್ಪ ಸ್ವಲ್ಪ ಬದಲಾವಣೆಗಳಾಗಿರಬಹುದಷ್ಟೆ.
ಆಲಿವ್ ಎಣ್ಣೆಯೊಡನೆ ಲಿಥಾರ್ಜ್ (ಸೀಸದ ಮಾನಾಕ್ಸೈಡ್ Pbo) ಸೇರಿಸಿ ಕಾಯಿಸಿದರೆ ಗ್ಲಿಸರಾಲ್ ಬರುವುದೆಂದು ಷೀಲೆ 1779ರಲ್ಲೇ ಶೋಧಿಸಿದ್ದ. ಕೊಬ್ಬು ಮತ್ತು ಎಣ್ಣೆಗಳ ರಾಸಾಯನಿಕ ಸ್ವರೂಪವನ್ನು 1815ರಲ್ಲಿ ಮೊದಲು ಹೊರಗೆಡಹಿದ ಕೀರ್ತಿ ಮೈಕೇಲ್ ಯೂಜಿನ್ ಷೆವ್ರೆಲನಿಗೆ ಸಲ್ಲುವುದು. 1819ರಲ್ಲಿ ಜೆ.ಜೆ.ಇ.ಪೌಟೆ ಓಲಿಯಿಕಾಮ್ಲವನ್ನು ಇಲೇಡಿಕಾಮ್ಲವಾಗಿ ಮಾರ್ಪಡಿಸಿದುದು. 1828ರಲ್ಲಿ ಸಿ.ಎ.ಗಸ್ಸರೋವ್ ಅಪರ್ಯಾಪ್ತ ದ್ರವ್ಯಾಮ್ಲಗಳನ್ನು ಘನಾಮ್ಲಗಳಿಂದ ಪ್ರತ್ಯೇಕಿಸಿದುದು. ಈ ಕ್ಷೇತ್ರದಲ್ಲಿ ಹೆಸರಾಂತ ಪ್ರಾಥಮಿಕ ಶೋಧನೆ ಎನಿಸಿಕೊಂಡಿದೆ. ಒಂದನೆಯ ಮಹಾಯುದ್ಧದ ತರುವಾಯ (1914-18) ಕೊಬ್ಬಿನ ಆಮ್ಲಗಳು ಮತ್ತು ಗ್ಲಿಸರೈಡುಗಳ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚಿನ ಅರಿವು ಉಂಟಾಗಲು ಆರಂಭವಾಯಿತು. ಈಗ ಅವುಗಳ ಬಳಕೆ ಎಷ್ಟು ವ್ಯಾಪಕವಾಗಿದೆಯೆಂದರೆ ಕೊಬ್ಬಿನ ರಾಸಾಯನಿಕಗಳಿಗೆ ಸಂಬಂಧಿಸಿದ ಪ್ರತ್ಯೇಕ ಕೈಗಾರಿಕೆಯೇ ರೂಪುಗೊಳ್ಳುತ್ತಲಿದೆ.  
ಬೆಣ್ಣೆ, ಲಾರ್ಡ್ ಎಂಬ ಹಂದಿಯ ಹೊಟ್ಟೆಯೊಳಗಿನ ಕೊಬ್ಬು, ಟ್ಯಾಲೋ ಎಂಬ ಪ್ರಾಣಿಗಳ ಮೇದಸ್ಸನ್ನು ಕರಗಿಸಿ ಪಡೆದ ಜಿಡ್ಡು ಪದಾರ್ಥ, ಕಾಡ್ ಲಿವರ್ ಎಣ್ಣೆ, ಷಾರ್ಕ್ ಲಿವರ್ ಎಣ್ಣೆ ಮುಂತಾದ ಮೀನಿನ ಎಣ್ಣೆಗಳು, ಸಸ್ಯಜನಿತ ನೆಲಗಡಲೆ, ಅಗಸೆ, ಕೊಬ್ಬರಿ ಮತ್ತು ಹರಳೆಣ್ಣೆಗಳು-ಇವೆಲ್ಲ ಎಸ್ಟರುಗಳು. ಅಂದರೆ ಆಲ್ಕೊಹಾಲ್ ಮತ್ತು ಆಮ್ಲಗಳ ಸಂಯೋಗದಿಂದ ಹುಟ್ಟಿದ ಲವಣಸದೃಶ ಸಾವಯವ ಸಂಯುಕ್ತಗಳು. ಇವುಗಳಲ್ಲಿರುವ ಆಲ್ಕೊಹಾಲಿಗೆ ಗ್ಲಿಸರಾಲ್ ಎಂದು ಹೆಸರು. ಅದರಲ್ಲಿ ಮೂರು ಹೈಡ್ರಾಕ್ಸಿಲ್ ಗುಂಪುಗಳಿವೆ (ಗ್ರೂಪ್ಸ್). ಅಂದರೆ ಟ್ರೈಹೈಡ್ರಿಕ್ ಆಲ್ಕೊಹಾಲ್ ಎಂದಾಯಿತು. ಪ್ಯಾರಫಿನ್ ವರ್ಗದ ಉನ್ನತ ಹೈಡ್ರೊಕಾರ್ಬನ್ನುಗಳಿಗೆ ಸಂಬಂಧಿಸಿದ ಕೆಲವು ಆಮ್ಲಗಳಿವೆ. ಅವು ಗ್ಲಿಸರಾಲಿನೊಂದಿಗೆ ಕೂಡಿ ಮೂರು ನೀರಿನ ಅಣುಗಳನ್ನು ಕಳೆದುಕೊಂಡು ಗ್ಲಿಸರೈಡುಗಳಾಗುತ್ತವೆ. ಸಸ್ಯದ ನೈಸರ್ಗಿಕ ಪ್ರಯೋಗಶಾಲೆಯಲ್ಲಿ ನಡೆಯುವ ಈ ಕ್ರಿಯೆಯನ್ನು ಕೆಳಕಂಡಂತೆ ಚಿತ್ರಿಸಿಕೊಳ್ಳಬಹುದು.

ಅಊ2ಔ ಊ	ಊಔಔಅಖ				ಅಊ2ಔ.ಔಅ.ಖ
ಅಊ.ಔ ಊ   +   ಊಔಔಅಖ 			 	ಅಊ.ಔ.ಔಅ.ಖ
ಅಊ2ಔ ಊ 	ಊಔಔಅಖ				ಅಊ2.ಔ.ಔಅ.ಖ
ಗ್ಲಿಸರಾಲ್		ಉನ್ನತ ಪ್ಯಾರಾಫಿನ್ನಿಗೆ			ಟ್ರೈಗ್ಲಿಸರೈಡ್

		ಸಂಬಂಧಿಸಿದ ಆಮ್ಲ			(ಕೊಬ್ಬು ಅಥವಾ ತೈಲ)

ಈ ನೈಸರ್ಗಿಕ ಎಸ್ಟರಿಫಿಕೇಷನ್ ಕ್ರಿಯೆಯಲ್ಲಿ ಭಾಗವಹಿಸುವ ಪರ್ಯಾಪ್ತ ಆಮ್ಲಗಳಲ್ಲಿ ಸ್ಟಿಯರಿಕ್ ಮತ್ತು ಪಾಮಿಟಿಕ್ ಅಮ್ಲಗಳು ಮುಖ್ಯವಾದುವು.
ಸ್ಟಿಯರಿಕ್ ಆಮ್ಲ  ಅಊ3(ಅಊ2)15ಅಊ2.ಅಔಔಊ
ಪಾಮಿಟಿಕ್ ಆಮ್ಲ ಅಊ3(ಅಊ2)13ಅಊ2.ಅಔಔಊ
ಆಮ್ಲದ ಭಾಗ ಕೆಲವು ವೇಳೆ ಅಪರ್ಯಾಪ್ತವಾಗಿರಬಹುದು. ಅಂದರೆ ಎರಡು ಇಂಗಾಲದ ಪರಮಾಣುಗಳ ನಡುವೆ ದ್ವಿಬಂಧವಿರಬಹುದು. ಅಂಥ ಆಮ್ಲಗಳನ್ನು ಕೆಳಗೆ ಹೆಸರಿಸಲಾಗಿದೆ.
ಓಲಿಯಿಕ್ ಆಮ್ಲ ಅಊ3.(ಅಊ2)7.ಅಊ=ಅಊ-(ಅಊ2)7.ಅಔಔಊ
ಲಿನೊಲಿಯಿಕ್ ಆಮ್ಲ ಅಊ3(ಅಊ2)4.ಅಊ=ಅಊ-(ಅಊ2)-ಅಊ
=ಅಊ-(ಅಊ2)7.ಅಔಔಊ
ಲಿನೊಲಿನಿಕ್ ಆಮ್ಲ ಅಊ3-ಅಊ2-ಅಊ=ಅಊ-ಅಊ2-ಅಊ
ಅಊ-ಅಊ2-ಅಊಅಊ(ಅಊ2)7.ಅಔಔಊ
ಅರ್ಯಾಬೆಡೋನಿಕ್ ಆಮ್ಲ ಅಊ3.(ಅಊ2)4.ಅಊ=ಅಊ.ಅಊ2(ಅಊ=ಅಊ-ಅಊ2)2
ಅಊ=ಅಊ(ಅಊ2)3.ಅಔಔಊ
ಮೊದಲು ಮೂರು ಅಪರ್ಯಾಪ್ತ ಆಮ್ಲಗಳಲ್ಲಿ 18 ಇಂಗಾಲದ ಪರಮಾಣುಗಳಿವೆ.
ಸಾಮಾನ್ಯ ಉಷ್ಣದಲ್ಲಿ ಎಣ್ಣೆಗಳು, ದ್ರವಗಳು, ಕೊಬ್ಬುಗಳು ಘನವಸ್ತುಗಳು. ಈ ಆಧಾರದಮೇಲೆ ನಾವು ಗ್ಲಿಸರೈಡುಗಳನ್ನು ವರ್ಗೀಕರಿಸುವಂತಿಲ್ಲ. ಏಕೆಂದರೆ ಕೊಬ್ಬರಿಎಣ್ಣೆಯನ್ನು ಚಳಿಗಾಲದಲ್ಲಿ ಗಟ್ಟಿಯಾಗುವುದರಿಂದ ಕೊಬ್ಬೆಂದೂ ಬೇಸಗೆಯಲ್ಲಿ ದ್ರವರೂಪದಲ್ಲಿರುವುದರಿಂದ ಎಣ್ಣೆಯೆಂದೂ ಕರೆಯಬೇಕಾಗುತ್ತದೆ. ಇದು ಆಭಾಸಕ್ಕೆಡೆಯಾಗುತ್ತದೆ. ಆದ್ದರಿಂದ ಅಪರ್ಯಾಪ್ತತೆ ಹೆಚ್ಚಾಗಿದ್ದರೆ ಎಣ್ಣೆಯೆಂದೂ ಕಡಿಮೆಯಾಗಿದ್ದರೆ ಕೊಬ್ಬೆಂದೂ ವಿಂಗಡಿಸುವುದು ಸಮಂಜಸವಾಗಿದೆ. ಅಪರ್ಯಾಪ್ತತೆ ಹೆಚ್ಚಿದಷ್ಟೂ ಕೊಬ್ಬಿನ ದ್ರವೀಕರಣ ಬಿಂದು ಕಡಿಮೆಯಾಗುವುದನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. 20ಲಿ ಸೆ. ಗಿಂತ ಕಡಿಮೆ ದ್ರವೀಕರಣ ಬಿಂದುವಿರುವ ವಸ್ತು ಕೊಬ್ಬು ಎನಿಸಿಕೊಳ್ಳುತ್ತದೆ. ಇತ್ತೀಚೆಗೆ ಎಣ್ಣೆಗಳಿಗೂ ಕೊಬ್ಬು ಎಂಬ ಪದದ ಅನ್ವಯಮಾಡುವುದು ರಸಾಯನ ವಿಜ್ಞಾನಿಗಳ ಪರಿಪಾಠವಾಗಿದೆ. ಇದು ಒಂದು ಅನುಕೂಲವೇ ಸರಿ. ಏಕೆಂದರೆ ಗ್ಲಿಸರೈಡುಗಳಲ್ಲದ ಖನಿಜ ಮತ್ತು ಸುಗಂಧ ತೈಲಗಳಿಗೂ ಇರುವ ಮೂಲ ವ್ಯತ್ಯಾಸ ಇದರಿಂದ ವ್ಯಕ್ತವಾಗುತ್ತದೆ.
ಆಮ್ಲಶೇಷಗಳೆಲ್ಲ ಸಜಾತೀಯವಾಗಿದ್ದರೆ ಸರಳ ಗ್ಲಿಸರೈಡುಗಳಾಗುತ್ತವೆ. ಉದಾಹರಣೆ:
ಅಊ2.ಔ.ಔಅ.ಅ17ಊ35		ಅಊ2.ಔ.ಔಅ.ಅ15ಊ31		ಅಊ2.ಔ.ಔಅ.ಅ17ಊ33

ಅಊ.ಔ.ಔಅ. ಅ17ಊ35		ಅಊ.ಔ.ಔಅ. ಅ15ಊ31		ಅಊ.ಔ.ಔಅ. ಅ17ಊ33

ಅಊ2.ಔ.ಔಅ. ಅ17ಊ35		ಅಊ2.ಔ.ಔಅ. ಅ15ಊ31		ಅಊ2.ಔ.ಔಅ. ಅ17ಊ33
ಟ್ರೈಸ್ಟಿಯರಿನ್			ಟ್ರೈಪಾಮಿಟಿನ್			ಟ್ರೈಓಲಿಯಿನ್

	ಆಮ್ಲದ ಭಾಗಗಳು ವಿಜಾತಿಯವಾಗಿದ್ದರೆ ಮಿಶ್ರ ಗ್ಲಿಸರೈಡುಗಳು ಉಂಟಾಗುವುವು. 
ಉದಾಹರಣೆ:
α    ಅಊ2.ಔ.ಔಅ.ಅ17ಊ35		ಅಊ2.ಔ.ಔಅ.ಅ15ಊ31		ಅಊ2.ಔ.ಔಅ.ಅ17ಊ33
	
β    ಅಊ.ಔ.ಔಅ. ಅ17ಊ35		ಅಊ.ಔ.ಔಅ. ಅ15ಊ31		ಅಊ.ಔ.ಔಅ. ಅ17ಊ33
	
α   ಅಊ2.ಔ.ಔಅ. ಅ17ಊ35		ಅಊ2.ಔ.ಔಅ. ಅ15ಊ31		ಅಊ2.ಔ.ಔಅ. ಅ17ಊ33
α - ಸ್ಟಿಯರೊ	β α- ಡೈಪಾಮಿಟಿನ್	β - ಸ್ಟಿಯೆರೊ		ααಡೈಪಾಮಿಟಿನ್
ಇಂಥ ಗ್ಲಿಸರೈಡುಗಳ ಸಂಕೀರ್ಣ ಮಿಶ್ರಣದಿಂದ ತೈಲ ಅಥವಾ ಕೊಬ್ಬು ಉಂಟಾಗುತ್ತವೆ. α β α ಮೂರು ಸ್ಥಾನಗಳಲ್ಲಿರುವ ಆಮ್ಲಗಳೂ ಬೇರೆ ಬೇರೆಯಾಗಿರಬಹುದು. ಆದ್ದರಿಂದ ಇಂಥ ಒಂದು ಕೊಬ್ಬಿನಲ್ಲಿ 18 ವಿವಿಧ ಗ್ಲಿಸರೈಡುಗಳಿರುವ ಸಾಧ್ಯತೆಯಿದೆ. ಮೂರಕ್ಕಿಂತಲೂ ಹೆಚ್ಚು ಆಮ್ಲಗಳು ಭಾಗವಹಿಸಿರಬಹುದು. ಉದಾಹರಣೆಗೆ ಬೆಣ್ಣೆಯ ಕೊಬ್ಬಿನಿಂದ 14 ವಿವಿಧ ಆಮ್ಲಗಳನ್ನು ಪಡೆದ ದಾಖಲೆಯಿದೆ. ಅವುಗಳಲ್ಲಿ ಮುಖ್ಯವಾದ ಆಮ್ಲಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಆಮ್ಲ
ಸೂತ್ರ
ದ್ರವೀಕರಣ          
ಬಿಂದು                          0ಲಿ ಸೆಂ.ಗ್ರೇ.
ಮೂಲ

ಬ್ಯುಟಿರಿಕ್
ಕೆಪ್ರೋಯಿಕ್
ಕೆಪ್ರಿಲಿಕ್
ಕ್ಯಾಪ್ರಿಕ್
ಲಾರಿಕ್
ಮಿರಿಸ್ಟಿಕ್
ಪಾಮಿಟಿಕ್

ಸ್ಟಿಯರಿಕ್
ಓಲಿಯಿಕ್
ಲಿನೊಲಿಯಿಕ್

ಲಿನೊಲಿನಿಕ್
ರಿಸಿನ್ 
ಓಲಿಯಿಕ್

ಅರ್ಯಾಚಿಡೋನಿಕ್
ಅ3ಊ7.ಅಔಔಊ
ಅ5ಊ11.ಅಔಔಊ
ಅ7ಊ15.ಅಔಔಊ
ಅ9ಊ19.ಅಔಔಊ
ಅ3ಊ7.ಅಔಔಊ
ಅ11ಊ23.ಅಔಔಊ
ಅ13ಊ27.ಅಔಔಊ

ಅ15ಊ31.ಅಔಔಊ
ಅ17ಊ35.ಅಔಔಊ
ಅ17ಊ33.ಅಔಔಊ

ಅ17ಊ31.ಅಔಔಊ
ಅ17ಊ29.ಅಔಔಊ
(ಇದರಲ್ಲಿ ಒಂದು 
ದ್ವಿಬಂಧವೂ 
ಒಂದು ಹೈಡ್ರಾಕ್ಸಿಲ್ 
ಗುಂಪೂ ಇವೆ.)
ಅ19ಊ31.ಅಔಔಊ
(ಇದರಲ್ಲಿ ನಾಲ್ಕು 
ದ್ವಿಬಂಧಗಳಿವೆ)
-4.7
-2
16
31.5
44
58
64

69.4
14
-11

ಬೆಣ್ಣೆ
ಬೆಣ್ಣೆ, ಕೊಬ್ಬರಿಎಣ್ಣೆ
ಬೆಣ್ಣೆ, ಪಾಮ್ ಎಣ್ಣೆ
ಬೆಣ್ಣೆ, ಕೊಬ್ಬರಿಎಣ್ಣೆ
ಬೆಣ್ಣೆ, ಕೊಬ್ಬರಿಎಣ್ಣೆ
ಕೊಬ್ಬರಿಎಣ್ಣೆ
ಪಾಮ್‍ಎಣ್ಣೆ ಪ್ರಾಣಿಗಳ 
ಕೊಬ್ಬು
ಕೊಬ್ಬುಗಳು, ಎಣ್ಣೆಗಳು
ಕೊಬ್ಬುಗಳು, ಎಣ್ಣೆಗಳು
ಅಗಸೆಎಣ್ಣೆ, ಹತ್ತಿಬೀಜದ 
ಎಣ್ಣೆ

ಅಗಸೆ ಎಣ್ಣೆ
ಹರಳೆಣ್ಣೆ

ಮುಖ್ಯವಾದ ಕೊಬ್ಬು ಮತ್ತು ತೈಲಗಳ ಪ್ರಸರಣ, ಉಪಯೋಗ ಇತ್ಯಾದಿ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ.
ಸಸ್ಯತೈಲಗಳು
ತೈಲ ಅಥವಾ ಕೊಬ್ಬು
ಉತ್ಪಾದಿಸುವ ಮುಖ್ಯ ದೇಶಗಳು
ಅಯೊಡೀನ್ ಮೌಲ್ಯ
ಪ್ರಮುಖ ಉಪಯೋಗಗಳು

ಒಣಗುವ ತೈಲಗಳು
ಪೆರಿಲ್ಲ

ಅಗಸೆ 

ಟಂಗ್

ಅಯ್ಟಿಸಿಕಾ

ಚೀನ, ಕೊರಿಯ, ಜಪಾನ್, ಭಾರತ

193-208

ಪೆಯಿಂಟ್, ವಾರ್ನಿಷ್

ಆರ್ಜಂಟೀನ, ಭಾರತ, ಉತ್ತರ ಅಮೆರಿಕ, ರಷ್ಯ
175-205
ಪೆಯಿಂಟ್, ವಾರ್ನಿಷ್, ಲಿನೋಲಿಯಂ, ಅಚ್ಚು ಮಾಡುವ ಶಾಯಿ

ಚೀನ, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನಗಳು
160-175
ಪೆಯಿಂಟ್, ವಾರ್ನಿಷ್

ಬ್ರೆಜಿಲ್
139-155
ಪೆಯಿಂಟ್, ವಾರ್ನಿಷ್

ಅರೆ ಒಣಗುವ ಎಣ್ಣೆಗಳು
ಗಸಗಸೆ
ಕುಸುಬೆ

ಸೋಯಾ ಅವರೆ

ಮುಸುಕಿನ ಜೋಳ

ಸೂರ್ಯಕಾಂತಿ
ಹತ್ತಿಬೀಜ

ಎಳ್ಳು 
ರೇಪ್

ಭಾರತ

123-143

ಮೆದುಸಾಬೂನು, ಮಸಾಲೆ ಎಣ್ಣೆ

ಭಾರತ, ಅಮೆರಿಕ ಸಂಯುಕ್ತ ಸಂಸ್ಥಾನಗಳು 
130-150
ಮಸಾಲೆ ಎಣ್ಣೆ ಅಂಟುಗಳು, ಪೆಯಿಂಟುಗಳು

ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನ, ಮಂಚೂರಿಯ
125-140
ಆಹಾರ, ಪೆಯಿಂಟುಗಳು, ಅಂಟುಗಳು, ರಾಸಾಯನಿಕಗಳು

ಅಮೆರಿಕ ಸಂಯುಕ್ತ ಸಂಸ್ಥಾನಗಳು, ಆರ್ಜಂಟೀನ, ಯೂರೋಪ್
115-130
ಆಹಾರ

ದಕ್ಷಿಣ ಅಮೆರಿಕ, ರಷ್ಯ
120-140
ಆಹಾರ

ಅಮೆರಿಕ ಸಂಯುಕ್ತ ಸಂಸ್ಥಾನ, ಭಾರತ, ಈಜಿಪ್ಟ್, ಮೆಕ್ಸಿಕೋ
100-116
ಆಹಾರ, ಸಾಬೂನು

ಭಾರತ, ಈಜಿಪ್ಟ್ 
103-118
ಆಹಾರ, ಸಾಬೂನು

ಈಸ್ಟ್ ಇಂಡಿಯಾ, ಯೂರೋಪ್
94-102
ಆಹಾರ, ಕೀಲೆಣ್ಣೆ

ಒಣಗದ ತೈಲಗಳು
ಬಾದಾಮಿ
ಕಡಲೆಕಾಯಿ

ಆಲಿವ್

ಹರಳು

ದಕ್ಷಿಣ ಯೂರೋಪ್, ಉತ್ತರ ಆಫ್ರಿಕ

93-100

ಪರಿಮಳಗಳು, ವೈದ್ಯಕೀಯ, ಆಹಾರ

ಭಾರತ, ಪಶ್ಚಿಮ ಆಫ್ರಿಕ, ಚೀನ, ಅಮೆರಿಕ ಸಂಯುಕ್ತ ಸಂಸ್ಥಾನ
85-100
ಆಹಾರ

ಮೆಡಿಟರೇನಿಯನ್ ತೀರ ಪ್ರದೇಶ, ಅಮೆರಿಕ ಸಂಯುಕ್ತ ಸಂಸ್ಥಾನ
75-95
ಆಹಾರ, ಸಾಬೂನು, ಕೀಲೆಣ್ಣೆ, ವೈದ್ಯಕೀಯ

ಭಾರತ, ಮೆಡಿಟರೇನಿಯನ್ ದೇಶಗಳು, ಬ್ರೆಜಿûಲ್, ಅಮೆರಿಕ ಸಂಯುಕ್ತ ಸಂಸ್ಥಾನ
80-90
ವೈದ್ಯಕೀಯ, ಕೀಲೆಣ್ಣೆ, ರಾಸಾಯನಿಕಗಳು

ಪ್ರಾಣಿಗಳ ತೈಲಗಳು 
1
2
3
4

ಕಡಲ ಪ್ರಾಣಿಗಳಿಂದಾದ ತೈಲಗಳು
ಸಾರ್ಡೀನ್ ಮೀನು

ಮೆನ್‍ಹೇಡನ್

ಹೆರ್ರಿಂಗ್ ಮೀನು

ಕಾಡ್‍ಲಿವರ್

ಷಾರ್ಕ್‍ಲಿವರ್
ಸೀಲ್

ತಿಮಿಂಗಲ

ಉತ್ತರ ಅಮೆರಿಕದ ಪಶ್ಚಿಮತೀರ, ಜಪಾನ್

170-190

ಅಂಟುಗಳು, ಲಿನೋಲಿಯಂ,ಪೆಯಿಂಟುಗಳು, ಆಹಾರ, ಚರ್ಮ ಹದಮಾಡಲು

ಉತ್ತರ ಅಮೆರಿಕದ ಅಟ್ಲಾಂಟಿಕ್ ತೀರ
140-173
ಅಂಟುಗಳು, ಲಿನೋಲಿಯಂ, ಪೆಯಿಂಟುಗಳು, ಆಹಾರ, ಚರ್ಮ ಹದಮಾಡಲು

ಉತ್ತರ ಸಮುದ್ರ, ಜಪಾನ್
120-145
ಚರ್ಮ ಹದಮಾಡಲು, ಪೆಯಿಂಟುಗಳು, ಆಹಾರ

ಉತ್ತರ ಸಮುದ್ರ, ಉತ್ತರ ಅಮೆರಿಕದ ಪೂರ್ವತೀರ
120-180
ಜೀವಾತುಗಳು, ಚರ್ಮ ಹದಮಾಡಲು

ಉತ್ತರ ಅಮೆರಿಕದ ತೀರಪ್ರದೇಶಗಳು
100-115
ಜೀವಾತುಗಳು, ಚರ್ಮ ಹದಮಾಡಲು

ಉತ್ತರ ಮತ್ತು ದಕ್ಷಿಣದ ಮೇರು ಪ್ರದೇಶಗಳು 
127-147
ಆಹಾರ, ಸಾಬೂನು, ಚರ್ಮ ಹದಮಾಡಲು

ಉತ್ತರ ಮತ್ತು ದಕ್ಷಿಣದ ಮೇರು ಪ್ರದೇಶಗಳು
110-150
ಆಹಾರ, ಸಾಬೂನು, ಚರ್ಮ ಹದಮಾಡಲು

ಭೂಪ್ರಾಣಿಗಳು
ದನದ ಪಾದ
ಅಮೆರಿಕ ಸಂ.ಸಂ., ದಕ್ಷಿಣ ಅಮೆರಿಕ, ಯೂರೋಪ್
65-75
ಕೀಲೆಣ್ಣೆ, ಉತ್ತಮದರ್ಜೆಯ ಚರ್ಮದ ತಯಾರಿಕೆ

ಸಸ್ಯಜನ್ಯ ಕೊಬ್ಬುಗಳು 
ಮಾಹುವಾ ಬೆಣ್ಣೆ
ಭಾರತ, ಮಲಯ
53-67
ಆಹಾರ, ಸಾಬೂನು, ಮೇಣದ ಬತ್ತಿ

ಷೀಯಾ ಬೆಣ್ಣೆ
ಪಶ್ಚಿಮ ಆಫ್ರಿಕ, ಸೂಡಾನ್
53-65
ಆಹಾರ, ಸಾಬೂನು, ಮೇಣದ ಬತ್ತಿ

ಪಾಮ್ ಬೆಣ್ಣೆ
ಪಶ್ಚಿಮ ಆಫ್ರಿಕ
50-60
ಸಾಬೂನು, ಮೇಣದಬತ್ತಿ, ತವರ ಲೇಪನ ಉದ್ಯಮ

ಕೋಕೊ ಬೆಣ್ಣೆ
ವೆಸ್ಟ್ ಇಂಡೀಸ್
32-41
ಚಾಕಲೇಟು, ವೈದ್ಯಕೀಯ, ಪರಿಮಳ ದ್ರವ್ಯಗಳು

ಬಬಸ್ಸು ಎಣ್ಣೆ
ಪಶ್ಚಿಮ ಆಫ್ರಿಕ
9-18
ಆಹಾರ, ಸಾಬೂನು, ರಾಸಾಯನಿಕಗಳು

ಕೊಬ್ಬರಿ ಎಣ್ಣೆ
ಫಿಲಿಫೈನ್ಸ್ ದ್ವೀಪಗಳು, ಭಾರತ, ಸಿಲೋನ್
8-10
ಆಹಾರ, ಸಾಬೂನು, ರಾಸಾಯನಿಕಗಳು

ಜಪಾನ್ ಮೇಣ
ಚೀನ, ಭಾರತ, ಜಪಾನ್
5-17
ಪಾಲಿಷುಗಳು

ಪ್ರಾಣಿಗಳ ಕೊಬ್ಬುಗಳು
1
2
3
4

ಲಾರ್ಡ್
ಅಮೆರಿಕ ಸಂಯುಕ್ತ ಸಂಸ್ಥಾನ, ಮಧ್ಯ ಯೂರೋಪ್
45-70
ಆಹಾರ, ಸಾಬೂನು, ವೈದ್ಯಕೀಯ, ರಾಸಾಯನಿಕಗಳು

ಎಲುಬು
ಅಮೆರಿಕ ಸಂಯುಕ್ತ ಸಂಸ್ಥಾನ,
ಭಾರತ, ಯೂರೋಪ್
46-56
ಸಾಬೂನು, ಮೇಣದ ಬತ್ತಿ

ಟ್ಯಾಲೋ (ದನದ ಮಾಂಸದಿಂದ)
ಆರ್ಜಂಟೈನ, ಅಮೆರಿಕ ಸಂಯುಕ್ತ ಸಂಸ್ಥಾನ
30-45
ಆಹಾರ, ಸಾಬೂನು, ಮೇಣದಬತ್ತಿ, ರಾಸಾಯನಿಕಗಳು

ಟ್ಯಾಲೋ (ಕುರಿಯ ಮಾಂಸದಿಂದ)
ಆಸ್ಟ್ರೇಲೇಷಿಯ
25-45
ಆಹಾರ ಸಾಬೂನು

ಬೆಣ್ಣೆ
ಅಮೆರಿಕ ಸಂಯುಕ್ತ ಸಂಸ್ಥಾನ, ವಾಯುವ್ಯ ಯೂರೋಪ್, ಆಸ್ಟ್ರಲೇಷಿಯ, ಕೆನಡ
25-40
ಆಹಾರ

ತೈಲಧಾರಕ ಊತಕಗಳಿಂದ (ಟಿಶ್ಯೂಸ್) ಕೊಬ್ಬನ್ನು ಪಡೆಯಲು ಮೂರು ವಿಧಾನಗಳಿವೆ - ದ್ರವೀಕರಣ, ಹಿಂಡುವಿಕೆ, ಸಂಸ್ಕರಣ.
ದ್ರವೀಕರಣ : ಇಂದಿಗೂ ಕೆಲವು ದೇಶಗಳಲ್ಲಿ ಅನುಸರಿಸಲಾಗುತ್ತಿರುವ ಈ ಹಳೆಯ ಪದ್ಧತಿ ಪ್ರಕಾರ ತೈಲಯುಕ್ತ ಫಲಗಳನ್ನು ಗುಡ್ಡೆಹಾಕಿ ಬಿಸಿಲಿನಲ್ಲಿ ಒಣಗಿಸಿದರೆ ಎಣ್ಣೆ ಹೊರಸೂಸುವುದು. ಈ ಕ್ರಮವನ್ನೇ ಸ್ವಲ್ಪ ಸುಧಾರಿಸಿ ಪಾಮ್ ಎಣ್ಣೆಯ ತಯಾರಿಕೆಗೆ ಬಳಸುತ್ತಾರೆ. ಪಾಮ್ ಹಣ್ಣುಗಳನ್ನು ಕೊಯ್ದ ತತ್‍ಕ್ಷಣ ನೀರಿನಲ್ಲಿ ಕುದಿಸಿದರೆ ಎಣ್ಣೆ ತೇಲುತ್ತದೆ. ಅದನ್ನು ಗೋರಿಕೊಳ್ಳಬಹುದು. ತಮ್ಮ ಕೊಬ್ಬಿನ ಅಂಶವನ್ನು ಸುಲಭವಾಗಿ ತ್ಯಜಿಸುವ ಆಲಿವ್ ಮತ್ತು ಪಾಮ್ ಜಾತಿಯ ಹಣ್ಣು ಮತ್ತು ಬೀಜಗಳಿಗೆ ಈ ವಿಧಾನ ಅನ್ವಯಿಸುತ್ತದೆ. ತಿಮಿಂಗಲದ ಎಣ್ಣೆ, ಹಂದಿಯ ಕೊಬ್ಬು, ಟ್ಯಾಲೋ ಮತ್ತು ಎಲುಬಿನ ಕೊಬ್ಬು ಮೊದಲಾದುವನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಲೂ ಈ ವಿಧಾನ ಅನ್ವಯಿಸುತ್ತದೆ. ಕೊಬ್ಬಿನ ಊತಕಗಳನ್ನು ಸಣ್ಣ ತುಂಡುಗಳಾಗಿ ಹೆಚ್ಚಿ, ಹಬೆ ಪಚನಕಾರಿಗಳಲ್ಲಿ ಅಥವಾ ತೆರೆದ ಕಡಾಯಿಗಳಲ್ಲಿ ಕುದಿಸಲಾಗುವುದು. ಆಗ ಕೋಶಗಳಿಂದ ಕೊಬ್ಬು ಬಿಡುಗಡೆಯಾಗಿ ನೀರಿನ ಮೇಲೆ ತೇಲುವುದು. ಅದನ್ನು ಗೋರಿಹಾಕಬಹುದು. ಉಳಿದ ವಸ್ತುವನ್ನು ಪ್ರಾಣಿಗಳಿಗೆ ತಿನಿಸಾಗಿ ಅಥವಾ ಗೊಬ್ಬರವಾಗಿ ಉಪಯೋಗಿಸುವರು.
ಹಿಂಡುವಿಕೆ : ಕುದಿಸುವ ವಿಧಾನ ಬಹಳಷ್ಟು ಬೀಜಗಳಿಂದ ಎಣ್ಣೆ ಪಡೆಯಲು ಸಮರ್ಪಕವಲ್ಲ. ಇಂಥ ಸಂದರ್ಭಗಳಲ್ಲಿ ಎಣ್ಣೆ ಧಾರಕ ಕೋಶ ರಚನೆಯನ್ನು ಛಿದ್ರಗೊಳಿಸಲು ಅರೆಯುವುದು, ಒತ್ತಡದಿಂದ ಗಟ್ಟಿಸುವುದು, ಹಿಂಡುವುದು ಇತ್ಯಾದಿ ಕ್ರಮಗಳು ಅನಿವಾರ್ಯವಾಗುತ್ತವೆ. ಇದಕ್ಕಾಗಿ ಒರಳಿನಲ್ಲಿ ಎಣ್ಣೆಬೀಜಗಳನ್ನು ರುಬ್ಬುವ ಗಾಣದ ಪದ್ಧತಿ ಬಂದಿದೆ. ಇಂದಿಗೂ ನಮ್ಮಲ್ಲಿ ಈ ವಿಧಾನ ಅಲ್ಲಲ್ಲಿ ಬಳಕೆಯಲ್ಲಿದೆ. ಕಾಲಕ್ರಮದಲ್ಲಿ ಈ ವಿಧಾನದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಆಧುನಿಕ ಒತ್ತಡ ವಿಧಾನದಲ್ಲಿ ಮೂರುಹಂತಗಳಿವೆ : (i) ಅಯಸ್ಕಾಂತ ಪ್ರತ್ಯೇಕಿಯ ಸಹಾಯದಿಂದ ಲೋಹದ ಕಣಗಳನ್ನು ತೆಗೆದುಹಾಕುವುದು. (ii) ಅಗತ್ಯವಿದ್ದರೆ ತೊಗಟೆ ಬಿಡಿಸಿ ಚಿಪ್ಪನ್ನು ಬೇರ್ಪಡಿಸುವುದು. (iii) ತಿರುಳನ್ನು ಗಿರಣಿಗಳಲ್ಲಿ ಅರೆದು ಹಿಟ್ಟುಮಾಡುವುದು. (iv) ಕಾಯಿಸಿ ಅಥವಾ ಕಾಯಿಸದೆಯೇ ಸ್ಕ್ರ್ಯೂಪ್ರೆಸ್ಸುಗಳಲ್ಲಿ ಹಿಂಡುವುದು.   	
ಕಾಯಿಸದೆ ಹೊರಡಿಸಿದ ಎಣ್ಣೆಯಲ್ಲಿ ಅತ್ಯಲ್ಪ ಪ್ರಮಾಣದ ಕಶ್ಮಲಗಳು ಇರುವುದರಿಂದ ಹೆಚ್ಚಿನ ಸಂಸ್ಕರಣವಿಲ್ಲದೆ, ಅದನ್ನು ಆಹಾರವಾಗಿ ಬಳಸಬಹುದು. ಅಂಥ ಎಣ್ಣೆಗಳನ್ನು ಹಸಿ ಎಣ್ಣೆಗಳು (ಕೋಲ್ಡ್‍ಡ್ರಾನ್) ಎನ್ನುತ್ತಾರೆ. ಕಾಯಿಸಿ ಹಿಂಡಿದರೆ ಹೆಚ್ಚು ಎಣ್ಣೆಯನ್ನು ಹೊರಡಿಸಬಹುದು. ಆದರೆ ಅಂಥ ಎಣ್ಣೆಗೆ ದಟ್ಟವಾದ ಬಣ್ಣ ಪ್ರಾಪ್ತವಾಗುತ್ತದೆ. ಇದಕ್ಕೆ ಹಸಿ ಹರಳೆಣ್ಣೆ ನಿರ್ವರ್ಣವಾಗಿರುವುದೇ ಸಾಕ್ಷಿ. ಉಳಿದ ಹಿಂಡಿಯನ್ನು ಪ್ರಾಣಿಗಳ ಆಹಾರವಾಗಿಯೋ ಅಥವಾ ಗೊಬ್ಬರವಾಗಿಯೋ ವಿಲೆಮಾಡಲಾಗುವುದು.
ಲೀನಕಾರಿಗಳಿಂದ ಸಂಗ್ರಹಣ : ಒತ್ತಡ ವಿಧಾನದಿಂದ ಬಂದ ಹಿಂಡಿಯಲ್ಲಿ 3%-15% ಎಣ್ಣೆಯ ಅಂಶವಿದೆ. ಆ ಎಣ್ಣೆ ಹಿಂಡಿಗಿಂತ ಬೆಲೆ ಬಾಳುವಂತಿದ್ದರೆ ಲೀನಕಾರಿಗಳನ್ನುಪಯೋಗಿಸಿ ಅದನ್ನು ಬೇರ್ಪಡಿಸುವುದು ಲಾಭಕರವಾಗುತ್ತದೆ. ಇದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲಿಯಂಈಥರ್, ಹೆಕ್ಸೇನ್, ಹೆಪ್ಟೇನ್ ಮುಂತಾದ ಹೈಡ್ರೋಕಾರ್ಬನ್ ದ್ರವಗಳು ಉಪಯೋಗವಾಗುತ್ತವೆ. ಇಂಥ ಲೀನಕಾರಿಕೆಗಳ ಬಳಕೆಯಿಂದ ಎಣ್ಣೆ ತಯಾರಿಕೆಯ ಕಾರ್ಖಾನೆಗಳಲ್ಲಿ ಅಗ್ನಿ ಪ್ರಕರಣಗಳು ಮತ್ತು ಆಸ್ಫೋಟನೆಗಳು ಪದೇ ಪದೇ ನಡೆಯುವುದುಂಟು. ಇವನ್ನು ತಪ್ಪಿಸಲು ಟ್ರೈಕ್ಲೋರೊ ಎಥಿಲೀನ್ ಮೊದಲಾದ ಕ್ಲೋರಿನ್‍ಯುಕ್ತ ಲೀನಕಾರಿಗಳನ್ನು ಬಳಸುವುದು ಒಮ್ಮೆ ಆಚರಣೆಯಲ್ಲಿತ್ತು. ಆದರೆ ಇವು ಲೋಹಾಂಶಗಳನ್ನೂ ಕರಗಿಸಿಕೊಂಡು ಎಣ್ಣೆಯನ್ನು ವಿಷಪೂರಿತವಾಗಿ ಮಾಡುತ್ತಿದ್ದವು. ಆದ್ದರಿಂದ ಅವುಗಳ ಬಳಕೆ ಈಗ ನಿಂತಿದೆ. ಕೈಗಾರಿಕಾ ಪ್ರಮಾಣದಲ್ಲಿ ಎಣ್ಣೆ ತೆಗೆಯಬೇಕಾದಾಗ ಒತ್ತಡ ವಿಧಾನಕ್ಕಿಂತ ಲೀನಕಾರೀ ವಿಧಾನದಿಂದ ಮಿತವ್ಯಯ ಸಾಧನೆಯಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸೋಯಾ ಅವರೆಯಿಂದ ಎಣ್ಣೆ ತೆಗೆಯಲು ಕೇವಲ ಪೆಟ್ರೋಲಿಯಂ ಬೆಂಜಿûೀನ್ ಉಪಯೋಗಿಸುತ್ತಿದ್ದಾರೆ. ಸೋಯಾ ಅವರೆಗಿಂತ ಹೆಚ್ಚು ಎಣ್ಣೆಯ ಅಂಶವಿರುವ ಬೀಜಗಳಾದರೆ ಪೂರ್ವಭಾವಿಯಾಗಿ ಅವನ್ನು ಒತ್ತಡದಿಂದ ಹಿಂಡಿ ಅನಂತರ ಲೀನಕಾರಿಗಳಿಂದ ಉಳಿದ ಎಣ್ಣೆಯನ್ನು ಗ್ರಹಿಸುವುದು ಸೂಕ್ತ.
ಮತ್ತೊಂದು ಆಧುನಿಕ ತೈಲಗ್ರಹಣ ವಿಧಾನದಲ್ಲಿ ನಿಯತ ಕುದಿ ಮಿಶ್ರಣದ ತತ್ತ್ವವನ್ನು ಅಳವಡಿಸಿಕೊಳ್ಳಲಾಗಿದೆ. ತೈಲಭರಿತ ಊತಕಗಳನ್ನು ನೆನೆಸಲಾಗುವುದು. ಅನಂತರ ಸೂಕ್ತ ಕ್ಲೋರಿನ್‍ಯುಕ್ತ ಲೀನಕಾರಿಯೊಡನೆ ಕುದಿಸುವರು. ನಿಯತ ಕುದಿ ಮಿಶ್ರಣವನ್ನು ತಣಿಸಿದರೆ ಅದು ದ್ರವೀಕರಿಸುವುದು. ಅದರಿಂದ ನೀರನ್ನು ತೆಗೆದುಹಾಕಿ ಲೀನಕಾರಿಯನ್ನು ಗ್ರಾಹಕ ಯಂತ್ರಕ್ಕೆ ಹಿಂತಿರುಗಿಸಲಾಗುವುದು. ಫಲಿತ ವಸ್ತುವಿನಲ್ಲಿ ಮೂಲ ಪದಾರ್ಥದಲ್ಲಿದ್ದ ಕೊಬ್ಬಿನ ಬಹುಭಾಗ ಅಡಗಿರುವುದು. ಕ್ಲೋರಿನೀಕೃತ ಲೀನಕಾರಿಗಳು ದುಬಾರಿಯಾದರೂ ಉನ್ನತ ಉಷ್ಣತೆಗೆ ಈಡು ಮಾಡದೆ ಸಾಂದ್ರಿತ ಕೊಬ್ಬು ದೊರೆಯುವುದರಿಂದ ಈ ವಿಧಾನ ಆಶಾದಾಯಕವಾಗಿದೆ.
ಸಂಸ್ಕರಣ : ಅವುಗಳ ಮೂಲ, ಗುಣ ಮತ್ತು ಉದ್ದೇಶಿತ ಬಳಕೆಗಳಿಗೆ ಅನುಗುಣವಾಗಿ 
ಕೊಬ್ಬುಗಳನ್ನು ಸಂಸ್ಕರಿಸಬೇಕಾಗುತ್ತದೆ. ಕೆಲವು ಕೊಬ್ಬುಗಳನ್ನು ಕೇವಲ ತಳವೂರಿಸಿ  ಅಥವಾ ಶೋಧಿಸಿ ಉಪಯೋಗಿಸಿ ಬಿಡುವುದುಂಟು. ಹೆಚ್ಚು ಸಂಸ್ಕರಿಸದೆ ಉಪಯೋಗಿಸುವ ಖಾದ್ಯ ಎಣ್ಣೆಗಳೆಂದರೆ ಹಸಿ ಕಡಲೆಕಾಯಿ ಮತ್ತು ಕೊಬ್ಬರಿ ಎಣ್ಣೆಗಳು. ಅಗಾಧ ಪ್ರಮಾಣದ ಬೆಣ್ಣೆ ಮತ್ತು ಹಂದಿಯ ಕೊಬ್ಬನ್ನು ಸಹ ಕಡೆದು ಅಥವಾ ಕರಗಿಸಿ ವಿಶೇಷ ಸಂಸ್ಕರಣಕ್ಕೆ ಒಳಪಡಿಸದೆ ಉಪಯೋಗಿಸುತ್ತಾರೆ. ರುಚಿ ಮತ್ತು ವಾಸನೆ ರಹಿತವಾದ ಸಂಗ್ರಹ ಮಾಡಿದಾಗ ಕೆಡದಂತಿರುವ, ಖಾದ್ಯ ಎಣ್ಣೆ ಮತ್ತು ಕೊಬ್ಬುಗಳಿಗೆ ಬೇಡಿಕೆ ಏರುತ್ತಿರುವುದರಿಂದ ನವೀನ ತೈಲಸಂಸ್ಕರಣ ತಂತ್ರಗಳು ಹುಟ್ಟಿಕೊಂಡಿವೆ. 
ಕೊಬ್ಬಿನ ಬಣ್ಣ, ರುಚಿ ಮತ್ತು ವಾಸನೆಗಳಿಗೆ ಅದರಲ್ಲಿ ಗ್ಲಿಸರೈಡೇತರ ಅಂಶಗಳು ಕಾರಣ.  ಇವುಗಳ ಪೈಕಿ ಮೇಣಗಳು, ಮೂಲ ಕೊಬ್ಬಿನ ಆಮ್ಲಗಳು, ವರ್ಣದ್ರವ್ಯಗಳು, ಫಾಸ್ಫೊ ಲೈವಿಡ್ಡುಗಳನ್ನು ಹೆಸರಿಸಬಹುದು.  ಕಾಸ್ಟಿಕ್ ಸೋಡ (ಓಚಿಔಊ) ಅಥವಾ ಸೋಡಾ ಬೂದಿ (ಓಚಿ2ಅಔ3) ಯೊಡನೆ 40ಲಿ-85ಲಿ. ಸೆಂ.ಗ್ರೇ. ಉಷ್ಣತೆಗೆ ಕೊಬ್ಬನ್ನು ಕಾಯಿಸುವುದರಿಂದ ಈ ಅನಪೇಕ್ಷಿತ ವಸ್ತುಗಳ ಬಹುಭಾಗ ನಿವಾರಣೆಯಾಗುವುದು.  ಈ ಶುದ್ಧೀಕರಣಕ್ಕಾಗಿಯೇ ನಿರ್ಮಿತವಾದ ಒಂದು ತೊಟ್ಟಿಯಿದೆ.  ಕೊಬ್ಬಿನ ಆಮ್ಲಗಳು ಸಾಬೂನಿಗೆ ಪರಿವರ್ತನೆ ಹೊಂದಿ ಇತರ ಮಲಿನ ವಸ್ತುಗಳೊಂದಿಗೆ ತಳವೂರುವುವು.  ಇವುಗಳ ಬೇರ್ಪಡೆಗೆ ಕೇಂದ್ರಾಪಗಮನ ಯಂತ್ರವನ್ನು ಉಪಯೋಗಿಸುವುದುಂಟು.  ಅನಂತರ ಕೊಬ್ಬನ್ನು ನೀರಿನಿಂದ ತೊಳೆದು ಅದಕ್ಕಂಟಿರುವ ಕ್ಷಾರ ಮತ್ತು ಸಾಬೂನನ್ನು ಹೋಗಲಾಡಿಸಬೇಕು.  ಸೋಡಾಬೂದಿ ಅಥವಾ ಅಮೋನಿಯದಿಂದ ಸಂಸ್ಕರಿಸಿದ ಎಣ್ಣೆಗಳನ್ನು ಸೋಡಿಯಂ ಹ್ರೈಡ್ರಾಕ್ಸೈಡಿನ ವರ್ತನೆಗೆ ಒಳಪಡಿಸಿದ ಹೊರತು ಅವುಗಳ ಬಣ್ಣ ಸುಧಾರಿಸುವುದಿಲ್ಲ.  ಜಲಮಾರ್ಜನದ ಅನಂತರ ಎಣ್ಣೆಯನ್ನು ನಿರ್ವಾತ ಪರಿಸ್ಥಿತಿಯಲ್ಲಿ ಕಾಯಿಸಿ ಶುಷ್ಕಮಾಡಬೇಕು. ಇಂಥ ಸಂಸ್ಕರಿತ (ರಿಫೈನ್ಡ್) ಎಣ್ಣೆಯನ್ನು ನಯವಾಗಿ ಕೈಗಾರಿಕಾ ಉದ್ದೇಶಗಳಿಗೆ ಬಳಸಲಾಗುತ್ತದೆ.   ಆದರೆ ಅದು ಆಹಾರಯೋಗ್ಯವಾಗಬೇಕಾದರೆ ಹೆಚ್ಚಿನ ಸಂಸ್ಕರಣ ಅಗತ್ಯ.  ಸಾಮಾನ್ಯವಾಗಿ ಸಂಸ್ಕರಿತ ತೈಲಗಳು ತಟಸ್ಥ ವಸ್ತುಗಳು.  ಅವುಗಳಿಗೆ ಬಣ್ಣ ಕಡಿಮೆ ಮತ್ತು ಕಮಟು ಹಿಡೆಯುವ ಪ್ರವೃತ್ತಿ ಹೆಚ್ಚು. 
ತೈಲ ಸಂಸ್ಕರಣಕ್ಕೆ ಕ್ಷಾರೀಯ ವಸ್ತುಗಳಿಗೆ ಬದಲಾಗಿ ಸಲ್ಫ್ಯೂರಿಕ್ ಆಮ್ಲವನ್ನು ಬಳಸುವುದುಂಟು.  ಆಗ ಕೊಬ್ಬಿನ ಆಮ್ಲಗಳ ಹೊರತು ಉಳಿದ ಕಶ್ಮಲಗಳು ನಿವಾರಣೆಯಾಗುವುವು.  ಕೈಗಾರಿಕೆಯಲ್ಲಿ ಬಳಸುವ ಅಗಸೆ ಎಣ್ಣೆಗಳಂಥ ಎಣ್ಣೆಗಳಲ್ಲಿ ಆಮ್ಲಗಳ ಅಂಶ ಹೆಚ್ಚಿದ್ದರೆ ಬಾಧಕವಿಲ್ಲ.  ಅಂಥ ಎಣ್ಣೆಗಳ ಶುದ್ಧೀಕರಣಕ್ಕೆ ಈ ಆಮ್ಲ ವಿಧಾನ ಅನುಕೂಲ.  ಫಾಸ್ಫೊಲೈಪಿಡ್ಡುಗಳ ಭಾಗ ಕಡಿಮೆಯಿರುವ ಕೊಬ್ಬರಿ ಎಣ್ಣೆ ಇತ್ಯಾದಿಗಳ ಸಂಸ್ಕರಣಕ್ಕೆ ಉಗಿಯ ಪ್ರಯೋಗ ಸಾಧುವಾಗಿದೆ.  ಉನ್ನತ ಉಷ್ಣಕ್ಕೆ ಕಾಯಿಸಿದ ಎಣ್ಣೆಯ ಮೂಲಕ ಶುದ್ಧ ಉಗಿಯನ್ನು ಹಾಯಿಸುವುದು ಪದ್ಧತಿ.  ಇದರಿಂದ ಆಮ್ಲಗಳು ಉಗಿಯೊಡನೆ ಪಾರಾಗುವುವು.   ಕೆಲವು ಸಂದರ್ಭಗಳಲ್ಲಿ ಎಣ್ಣೆಯಲ್ಲಿರುವ ಫಾಸ್ಫೊ ಲೈಪಿಡ್ಡುಗಳನ್ನು ತೊಡೆದು ಹಾಕಲು ಅಸಿಟಿಕ್ ಅನ್‍ಹೈಡ್ರೈಡನ್ನು ಬಳಸಿರುತ್ತಾರೆ.  ಇದೂ ಉಗಿಯ ಪ್ರಯೋಗದಿಂದ ನಿವಾರಿಸಲ್ಪಡುತ್ತದೆ.  ತೈಲಸಂಸ್ಕರಣಕ್ಕೆ ಬಳಸುವ ಇತರ ವಸ್ತುಗಳೆಂದರೆ ಪೆಟ್ರೋಲಿಯಂ ಬೆಂಜಿûೀನ್, ಅಮೋನಿಯ, ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಆಕ್ಸೈಡುಗಳು, ಅಯಾನು ವಿನಿಯಮ ಅಂಟುಗಳು ಮತ್ತು ಕೆಲವು ಸಾವಯವ ಪ್ರತ್ಯಾಮ್ಲೀಯ ವಸ್ತುಗಳು. 
ಕೆಲವು ಎಣ್ಣೆಗಳಲ್ಲಿ ಫಾಸ್ಫೊಲೈಪಿಡ್ಡುಗಳು ಗಣನೀಯ ಪ್ರಮಾಣದಲ್ಲಿವೆ.  ಅಂಥ ಎಣ್ಣೆಗಳಿಗೆ ಕೊಂಚ ನೀರುಬೆರೆಸಿ ಕೇಂದ್ರಾಪಗಮನ ಯಂತ್ರದಲ್ಲಿಟ್ಟು ತಿರುಗಿಸಿದರೆ ಅಂಟು ಪದಾರ್ಥಗಳೂ ಫಾಸ್ಫೊಲೈಪಿಡ್ಡುಗಳೂ ಬೇರ್ಪಡುವುವು.  ಮುಸುಕಿನ ಜೋಳ ಮತ್ತು ಸೋಯಾ ಅವರೆ ಎಣ್ಣೆಗಳಿಂದ ಹೀಗೆ ಬೇರ್ಪಡಿಸಿದ ವಸ್ತುಗಳನ್ನು ಲೆಸಿಥಿನ್ ಎಂಬ ವ್ಯವಹಾರನಾಮದಿಂದ ಚಾಕಲೇಟ್ ತಿನಿಸುಗಳು, ಪೆಯಿಂಟುಗಳು, ಮಾರ್ಗರಿನ್ ಇತ್ಯಾದಿಗಳ ತಯಾರಿಕೆಯಲ್ಲಿ ಎಮಲ್ಷನ್‍ಕಾರಿಗಳಾಗಿ ಉಪಯೋಗಿಸುತ್ತಾರೆ.  ಅಂಟುರಹಿತ ಎಣ್ಣೆಯನ್ನು ಪೆಯಿಂಟುಗಳು ಮತ್ತು ಆಲ್ಕಿಡ್ ರೆಸಿನ್ನುಗಳನ್ನು ಮಾಡಲು ಬಳಸಬಹುದು; ಅಥವಾ ಕ್ಷಾರಗಳಿಂದ ಸಂಸ್ಕರಿಸಿ ಆಹಾರಯೋಗ್ಯವಾಗಿ ಮಾಡಬಹುದು. 
ಚಲುವೆ ಮಾಡುವುದು : 	ತೈಲದ ಬಣ್ಣವನ್ನು ಇನ್ನೂ ಕಡಿಮೆ ಮಾಡಬೇಕಾಗಿದ್ದರೆ ಅದಕ್ಕಾಗಿಯೇ ಹಲವು ಚಲುವೆಕಾರಿಗಳಿವೆ.  ಆಮ್ಲಮಿಶ್ರಿತ ಸೋಡಿಯಂ ಡೈಕ್ರೊಮೇಟ್, ಪಮ್ರ್ಯಾಂಗನೇಟುಗಳು, ಹೈಪೊಕ್ಲೋರೈಟುಗಳೂ ಮತ್ತು ಪರಾಕ್ಸೈಡುಗಳು ಈ ಕಾರ್ಯ ನಿರ್ವಹಿಸುತ್ತವೆ.  ಖಾದ್ಯ ಎಣ್ಣೆಗಳಿಗೆ ಇವುಗಳನ್ನು ಪ್ರಯೋಗಿಸುವುದು ವಿರಳ.  ಅಂಥ ಎಣ್ಣೆಗಳನ್ನು ಕಾಯಿಸಿ ಪಟುಗೊಳಿಸಿದ ಇಂಗಾಲ ಅಥವಾ ಮಣ್ಣುಗಳ ಸಂಪರ್ಕದಲ್ಲಿ ಬಿಡಲಾಗುವುದು.  ಇವು ಎಣ್ಣೆಯಲ್ಲಿರುವ ಕ್ಲೋರೋಫಿಲ್ ಮತ್ತು ಕೆರೋಟಿನಾಯ್ಡುಗಳನ್ನು ಹೀರುವುವು.  ಯಾವುದೇ ವಿಧಾನದಿಂದ ಚಲುವೆಗೊಳಿಸಿದರೂ ಎಣ್ಣೆಯ ಕಮುಟುಹಿಡಿಯುವ ಪ್ರವೃತ್ತಿ ವೃದ್ಧಿಯಾಗುವುದು.  ಇದೊಂದು ಅನನುಕೂಲ. 
ಸ್ಟಿಯರಿನ್ ನಿವಾರಣೆ : 	ಬೀಜದ ಕವಚದ ಮೇಲಿರುವ ಮೇಣ ತೈಲಗತವಾಗುವುದುಂಟು.  ಶೀಘ್ರಶೀತಲೀಕರಣದಿಂದ ಅದನ್ನು ಬೇರ್ಪಡಿಸಬಹುದು.  ಆದರೆ ಅದರಲ್ಲಿರುವ ಸ್ಟಿಯರಿನ್ ಬೇರ್ಪಡಲು ತೈಲವನ್ನು ನಿಧಾನವಾಗಿ ತಣಿಸಬೆಕು.   ಆಗ ಮಾತ್ರ ಅದು ದಪ್ಪ ಹರಳುಗಳಾಗಿ ಶೋಧಿಸಲು ಅನುಕೂಲವಾಗುತ್ತದೆ.  ಅಗಸೆ ಎಣ್ಣೆಯಿಂದ ಮೇಣವನ್ನು ತೆಗೆದ ಹೊರತು ಅದನ್ನು ಪೆಯಿಂಟುಗಳಿಗೆ ಬಳಸುವಂತಿಲ್ಲ.  ಹಾಗೆಯೇ ಮೀನಿನ ಎಣ್ಣೆಗಳಿಂದ ಟ್ರೈಸ್ಟಿಯರಿನ್ ನಿವಾರಿಸಿದ ಅನಂತರವೇ ಅದು ಆಲ್ಕಿಡ್ ರೆಸಿನ್ನುಗಳ ತಯಾರಿಕೆಗೆ ಯೋಗ್ಯವಾಗುವುದು.  ಹೀಗೆ ಸ್ಟಿಯರಿನ್ ಇಲ್ಲದ ಕಡಲೆಕಾಯಿ ಎಣ್ಣೆ ಕಡಿಮೆ ಉಷ್ಣತೆಯಲ್ಲಿಯೂ ದ್ರವರೂಪದಲ್ಲಿ ಇರಬಲ್ಲದು.  ಬೇರ್ಪಡಿಸಿದ ಸ್ಟಿಯರಿನ್ನಿನಿಂದ ಮೇಣದಬತ್ತಿ ಮಾಡುತ್ತಾರೆ. 
ಕೊಬ್ಬಿನ ಕ್ರಿಯವೈಶಿಷ್ಟ್ಯಗಳು. ಜಲವಿಶ್ಲೇಷಣೆ : 	ಇದಕ್ಕಾಗಿ ಸೋಡಿಯಂ ಅಥವಾ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಕ್ಷಾರಗಳನ್ನು ಬಳಸುವುದು ವಾಡಿಕೆ.  ಆಗ ಗ್ಲಿಸರಾಲ್ ಬೇರ್ಪಡುತ್ತದೆ.  ಕೊಬ್ಬಿನ ಆಮ್ಲ ಅದರ ಸೋಡಿಯಂ ಅಥವಾ ಪೊಟ್ಯಾಸಿಯಂ ಲವಣವಾಗುತ್ತದೆ.   ಇದೇ ಸಾಬೂನು.  ಆದ್ದರಿಂದ ಈ ಕ್ರಿಯೆಗೆ ಸಾಬೂನೀಕರಣ (ಸ್ಯಾಪೊನಿಫಿಕೇಶನ್) ಎಂದು ಹೆಸರಾಗಿದೆ.   ಇದನ್ನು ವಿವರಿಸಲು ಟ್ರೈಸ್ಟಿಯರಿನ್ ಉದಾಹರಣೆಯಾಗಿ ಬಳಸಬಹುದು. 

ಚಿತ್ರ-1

	ಕೊಬ್ಬಿನ ಆಮ್ಲಗಳ ಸೋಡಿಯಂ ಲವಣಗಳ ಸಂಕೀರ್ಣ ಮಿಶ್ರಣವೇ ಸಾಬೂನು.  ಪೊಟ್ಯಾಸಿಯಂ ಹೈಡ್ರಾಕ್ಸೈಡಿನಿಂದ ಜಲವಿಶ್ಲೇಷಣೆಗೊಳಿಸಿದಾಗ ಮೆದು ಸಾಬೂನು ದೊರೆಯುತ್ತದೆ.  ಆಲ್ಕೊಹಾಲನ್ನು ಸೇರಿಸಿ ಪಾರದರ್ಶಕ ಗ್ಲಿಸರಿನ್ ಸಾಬೂನನ್ನೂ ಆಲಿವ್‍ಎಣ್ಣೆಯಿಂದ ಕ್ಯಾಸ್ಟೀಲ್ ಸಾಬೂನನ್ನೂ ತಯಾರಿಸುವರು.  ಪರಿಮಳ ದ್ರವ್ಯಗಳು ಆಕರ್ಷಕ ಬಣ್ಣಗಳು ಮತ್ತು ಕ್ರಿಮಿನಾಶಕಗಳನ್ನು ಸೇರಿಸಿ ಸಾಬೂನಿನ ಉಪಯುಕ್ತತೆಯನ್ನು ಹೆಚ್ಚಿಸಬಹುದು. 
ಕೊಬ್ಬುಗಳ ಜಲವಿಶ್ಲೇಷಣೆಗೆ ಖನಿಜಾಮ್ಲ, ಒತ್ತಡದಲ್ಲಿರುವ ಉಗಿ ಅಥವಾ ಲೈಪೇಸ್ ಕಿಣ್ವ ಇದನ್ನು ಬಳಸಬಹುದು.  ನ್ಯಾಫ್ತಲೀನ್, ಓಲಿಯಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣಕ್ಕೆ ಟ್ವಿಚೆಲ್ ಪರಿವರ್ತಕ ಎಂದು ಹೆಸರು, ಇದರೊಡನೆ ಕೊಬ್ಬನ್ನು ಉಗಿಯ ಉಷ್ಣತೆಗೆ ಒಡ್ಡಿದಾಗ ಕೊಬ್ಬಿನ ಆಮ್ಲಗಳು ಬೇಗ ಬಿಡುಗಡೆಯಾಗುತ್ತವೆ.  ಕೈಗಾರಿಕೆಯಲ್ಲಿ ಈ ಕೊಬ್ಬಿನ ಆಮ್ಲಗಳಿಗೆ ವಿಶೇಷ ಮಹತ್ತ್ವವಿದೆ.  ಜಿûಂಕೆಸ್ಟಿಯರೇಟನ್ನು ಅಂಗರಾಗಪುಡಿಗಳಲ್ಲಿ ಮತ್ತು ತೇವನಿರೋಧಕವಾಗಿ ಉಪಯೋಗಿಸುವುದನ್ನು ನೆನೆಯಬಹುದು. 
ಪ್ರತಿಎಸ್ಟರೀಕರಣ (ಟ್ರಾನ್ಸ್‍ಎಸ್ಟರಿಫಿಕೇಷನ್) : ಕೊಬ್ಬನ್ನು ಮೀಥೈಲ್ ಅಥವಾ ಈಥೈಲ್ ಆಲ್ಕೊಹಾಲಿನೊಡನೆ ಆಮ್ಲೀಯ ಅಥವಾ ಕ್ಷಾರೀಯ ವೇಗವರ್ಧಕಗಳ ಸಂಪರ್ಕದಲ್ಲಿ ಕಾಯಿಸಿದಾಗ ಅದರಲ್ಲಿರುವ ಗ್ಲಿಸರೈಡುಗಳು ಕೊಬ್ಬಿನ ಆಮ್ಲಗಳ ಮೀಥೈಲ್ ಅಥವಾ ಈಥೈಲ್ ಎಸ್ಟರುಗಳಾಗಿ ಪರಿವರ್ತಿತವಾಗುವುವು.  ಈ ವಿಶೇಷ ಕ್ರಿಯೆಯನ್ನು ಪ್ರತಿಎಸ್ಟರೀಕರಣ ಎಂದು ಕರೆಯುವರು. 

ಚಿತ್ರ-2

ಈ ಮೀಥೈಲ್ ಎಸ್ಟರುಗಳನ್ನು ಆಂಶಿಕ ಬಾಷ್ಪೀಕರಣದಿಂದ ಬೇರ್ಪಡಿಸಿ ಅನಂತರ ಜಲವಿಶ್ಲೇಷಣೆಮಾಡಿದರೆ ಮೂಲ ಆಮ್ಲಗಳು ದೊರೆಯುವುವು.  ಕೊಬ್ಬಿನ ಆಮ್ಲಗಳನ್ನು ಗುರುತಿಸಲು ಈ ವಿಧಾನ ಸಹಾಯಕವಾಗಿದೆ. 
ಅಪಕರ್ಷಣ : 	ಎಸ್ಟರುಗಳ ಅಪಕರ್ಷಣದಿಂದ ಆಲ್ಕೊಹಾಲುಗಳೂ ಲಭಿಸುವುವು. ಕೊಬ್ಬುಗಳೂ ಎಸ್ಟರುಗಳಾದುದರಿಂದ ಅವು ಅಪಕರ್ಷಣ ಹೊಂದಬೇಕು.  ಹಾಗಾದಾಗ ಉದ್ದ ಸರಪಳಿ ರಚನೆಯುಳ್ಳ ಪ್ರೈಮರಿ ಆಲ್ಕೊಹಾಲುಗಳು ಹುಟ್ಟುತ್ತವೆ.  ಇದಕ್ಕಾಗಿ ಬಳಸುವ ಅಪಕರ್ಷಣಕಾರಿಗಳೆಂದರೆ ಸೋಡಿಯಂ ಮತ್ತು ಆಲ್ಕೊಹಾಲ್, ತಾಮ್ರದ ಕ್ರೋಮೈಟ್ (ಅuಔ.ಅuಅಡಿ2ಔ4) ವೇಗವರ್ಧಕದ ಸಂಪರ್ಕದಲ್ಲಿರುವ ಹೈಡ್ರೊಜನ್ (200 ವಾಯುಭಾರ ಒತ್ತಡದಲ್ಲಿ ಮತ್ತು 250o...... ಸೆಂ.ಗ್ರೇ. ಉಷ್ಣತೆಯಲ್ಲಿ ಇತ್ಯಾದಿ.    - ಪಾಮಿಟೊ  ಡೈಲಾರಿನ್ ಅಪಕರ್ಷಿತವಾದಾಗ ಲಾರಿಲ್ ಮತ್ತು ಪಾಮಿಟಿಲ್ ಆಲ್ಕೊಹಾಲುಗಳೂ ಗ್ಲಿಸರಾಲೂ ಉತ್ಪತ್ತಿಯಾಗುವುವು. 

ಚಿತ್ರ-3

ಕೊಬ್ಬರಿ ಎಣ್ಣೆಯ ಅಪಕರ್ಷಣದಿಂದ ಬಂದ ಆಲ್ಕೊಹಾಲುಗಳ ಮಿಶ್ರಣದಲ್ಲಿ ಲಾರಿಲ್ ಆಲ್ಕೊಹಾಲಿನ ಪ್ರಮಾಣ ಅಧಿಕವಾಗಿರುತ್ತದೆ.  ಸಾಬೂನಿಗೆ ಉತ್ತಮ ಬದಲಿ ವಸ್ತುಗಳೆಂದು ಹೆಸರಾಗಿರುವ ಮಾರ್ಜಕಗಳ (ಡಿಟರ್ಜೆಂಟ್ಸ್) ತಯಾರಿಕೆಗೆ ಈ ಉನ್ನತ ಆಲ್ಕೊಹಾಲುಗಳ ವಿನಿಯೋಗವಾಗುತ್ತಿದೆ. 
ಕೊಳೆಯುವಿಕೆ : 	 ಕೊಬ್ಬು ಹುಳಿಯಾಗಿ ದುರ್ವಾಸನೆ ಹುಟ್ಟಿದರೆ ಆಗ ಅದಕ್ಕೆ ಕಮಟು ಹಿಡಿದಿದೆ ಅಥವಾ ಕನರು ಬಂದಿದೆ ಎನ್ನುತ್ತೇವೆ.  ದುರ್ಗಂಧಯುಕ್ತ ಆಮ್ಲಗಳು ಆಲ್ಡಿಹೈಡುಗಳು ಮತ್ತು ಕೀಟೋನುಗಳ ಉತ್ಪನ್ನದಿಂದ ಹೀಗಾಗುತ್ತದೆ.  ಕನರು ವಾಸನೆಗೆ ಇನ್ನೂ ಹಲವಾರು ಕಾರಣಗಳಿರಬಹುದು.  ಸೂಕ್ಷ್ಮ ಜೀವಾಣುಗಳ ಪ್ರೇರಣೆಯಿಂದ ಕೊಬ್ಬು ನಿಧಾನವಾಗಿ ಜಲವಿಶ್ಲೇಷಣೆ ಹೊಂದಿ ದುರ್ವಾಸನೆಯುಳ್ಳ ಅ4-ಅ10 ಆಮ್ಲಗಳಾಗಿರಬಹುದು.  ಅಥವಾ ಈ ಆಮ್ಲಗಳು ಬೀಟಾ ಕೀಟಾನಿಕಾಮ್ಲಗಳಾಗಿ ಉತ್ಕರ್ಷಿತವಾಗಬಹುದು.  ಇವು ಇಂಗಾಲದ ಡೈಆಕ್ಸೈಡ್‍ನ್ನು ಕಳೆದುಕೊಂಡು ಅಹಿತ ವಾಸನೆಯುಳ್ಳ ಕೀಟೋನುಗಳಾಗಿ ಪರಿವರ್ತಿತವಾಗಬಹುದು.  ಈ ಕ್ರಿಯೆಗಳನ್ನು ಕೆಳಕಂಡಂತೆ ಚಿತ್ರಿಸಿಕೊಳ್ಳಬಹುದು.

ಚಿತ್ರ-4

ವಾಯು ಮಂಡಲದ ಆಕ್ಸಿಜನ್ನಿನ ಸಂಪರ್ಕದಲ್ಲಿ ಕೊಬ್ಬಿನ ಅಪರ್ಯಾಪ್ತ ಭಾಗ ಪೆರಾಕ್ಸೈಡುಗಳಾಗಿ ಉತ್ಕರ್ಷಿತವಾಗಿ ಅನಂತರ ಅವು ದುರ್ವಾಸನೆಯುಳ್ಳ ಆಲ್ಡಿಹೈಡುಗಳಿಗೆ ವಿಭಜಿಸುವುದು ಕನರು (ಕಮಟು) ನಾತಕ್ಕೆ ಪ್ರದಾನ ಕಾರಣವೆಂದು ತೋರುತ್ತದೆ.  ಇದನ್ನು ಟ್ರೈಓಲಿಯಿನ್ ಉದಾಹರಣೆಯಿಂದ ವಿವರಿಸಬಹುದು. 

ಚಿತ್ರ-5

ಪರ್ಯಾಪ್ತ ಕೊಬ್ಬುಗಳು ಕಮಟು ಹಿಡಿಯದಿರಲು ಅವುಗಳಲ್ಲಿ ಅಪರ್ಯಾಪ್ತ ಗುಂಪುಗಳು ಇಲ್ಲದಿರುವುದೇ ಕಾರಣ.  ಕಮಟು ಹಿಡಿಯುವುದನ್ನು ತಡೆಗಟ್ಟಲು ಕೊಬ್ಬಿನೊಡನೆ ಮೆಲೇಯಿಕ್ ಆನ್‍ಹೈಡ್ರೈಡಿನಂಥ ಉತ್ಕರ್ಷಣ ವಿರೋಧಿಗಳನ್ನು (ಆಂಟಿ ಆಕ್ಸಿಡೆಂಟ್ಸ್) ಮಿಶ್ರಣಮಾಡುವುದು ಪದ್ಧತಿ.  ಕೊಬ್ಬು ಕಮಟು ಹಿಡಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕ್ರೀಸ್ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು.  ಕೊಬ್ಬಿಗೆ ಈಥರ್, ಪ್ಲೋರೋ ಗ್ಲೂಸಿನಾಲ್ ಮತ್ತು ಹೈಡ್ರೊಕ್ಲೋರಿಕ್‍ಆಮ್ಲ ಸೇರಿಸಿದಾಗ ಕೆಂಪು ಬಣ್ಣ ಉಂಟಾದರೆ ಕೊಬ್ಬು ಕೊಳೆಯಲು ಆರಂಭವಾಗಿದೆ ಎಂದು ಖಚಿತವಾಗುತ್ತದೆ. 
ಜಲಜನಕೀಕರಣ (ಹೈಡ್ರೊಜಿನೇಶನ್) : ತೈಲಗಳಲ್ಲಿರುವ ಆಮ್ಲದ ಅಪರ್ಯಾಪ್ತ ಭಾಗವನ್ನು ಪರ್ಯಾಪ್ತಗೊಳಿಸಿ ಅವು ಕಮಟು ಹಿಡಿಯದಂತೆ ಮಾಡುವುದು ಇದರ ಉದ್ದೇಶ.  ಮೊದಲು ಎಣ್ಣೆಯನ್ನು 175ಲಿ-190ಲಿ ಸೆಂ.ಗ್ರೇ.  ಉಷ್ಣತಾಮಿತಿಗೆ ಕಾಯಿಸಬೇಕು.   ಒತ್ತಡ  2 ವಾಯುಭಾರದಷ್ಟಿದ್ದರೆ ಸಾಕು.  ಸೂಕ್ಷ್ಮ ಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವರ್ಧಕ ಅಗತ್ಯ (0. 05-0. 10%). ಸಾಮಾನ್ಯವಾಗಿ, ಕೀಸಲ್ ಘರ್ ಮೇಲೆ ನಿಕ್ಕಲನ್ನು ಹರಡಿ ಉಪಯೋಗಿಸುವುದು ರೂಢಿ.  ಈ ಸನ್ನಿವೇಶದಲ್ಲಿ ಹೈಡ್ರೊಜನ್ (ಜಲಜನಕ) ಹಾಯಿಸಿದರೆ, ದ್ವಿಬಂಧ ಸ್ಥಾನಗಳಲ್ಲಿರುವ ಇಂಗಾಲದ ಪರಮಾಣುಗಳಿಗೆ ಹೈಡ್ರೊಜನ್ನಿನ ಪರಮಾಣುಗಳು ಕೂಡಿ ಪರ್ಯಾಪ್ತಗೊಳಿಸುವುವು.  ಪರಿಣಾಮವಾಗಿ, ಎಣ್ಣೆ ಹೆಪ್ಪಾಗುವುದು.  ಮೂರು ದ್ವಿಬಂಧಗಳುಳ್ಳ ಲಿನೊಲಿಯಿಕ್ ಆಮ್ಲ ಮೊದಲೂ ಎರಡು ದ್ವಿಬಂಧಗಳಿರುವ ಲಿನೊಲಿಯಿಕ್ ಆಮ್ಲ ಅನಂತರವೂ ಒಂದು ದ್ವಿಬಂಧವಿರುವ ಓಲಿಯಿಕ್ ಆಮ್ಲ ಅಂತಿಮವಾಗಿಯೂ ಪರ್ಯಾಪ್ತಗೊಳ್ಳುವುವು.  ತೈಲ ಪರ್ಯಾಪ್ತವಾದಂತೆಲ್ಲ ಅದರ ಸ್ನಿಗ್ಧತೆ ಹೆಚ್ಚುತ್ತ ಬರುವುದು.  ಅದು ಅಪೇಕ್ಷಿತ ಮಟ್ಟ ತಲುಪಿದ ಕೂಡಲೇ ಜಲಜನಕೀಕರಣವನ್ನು ನಿಲ್ಲಿಸಲಾಗುವುದು.  ಪ್ರಯೋಗ ಪರಿಸ್ಥಿತಿಯನ್ನು ನಿಯಂತ್ರಿಸುವುದರ ಮೂಲಕ ಇದನ್ನು ಸಾಧಿಸುವರು.  ಉನ್ನತ ಉಷ್ಣತೆ, ಒತ್ತಡಗಳನ್ನೂ ಒಮ್ಮೆ ಉಪಯೋಗಿಸಿದ ವೇಗವರ್ಧಕವನ್ನೂ ಬಳಸಿದರೆ ಜನಜನಕೀಕರಣ ಕ್ರಮಬದ್ಧವಾಗಿ ನಡೆಯುವುದಿಲ್ಲ.   ಅತಿ ಗಟ್ಟಿಯಾದ ಕೊಬ್ಬು ಬೇಕಾಗಿದ್ದರೆ ಮಾತ್ರ ಹೀಗೆ ಮಾಡುವರು.  ಜಲಜನಕೀಕರಣದ ಅನಂತರ, ಬಿಸಿ ಎಣ್ಣೆಯನ್ನು ಶೋಧಿಸಿ ನಿಕ್ಕಲ್ ವೇಗವರ್ಧಕವನ್ನು ಸಂಗ್ರಹಿಸುವರು.   ಜಲಜನಕೀಕರಣ ಕಾಲದಲ್ಲಿ ಮತ್ತೊಂದು ಮುಖ್ಯ ಬದಲಾವಣೆ ನಡೆಯುವುದು.  

ಚಿತ್ರ-6

 ಅಪರ್ಯಾಪ್ತ ಆಮ್ಲದ ಭಾಗಗಳಲ್ಲಿರುವ ಪರಮಾಣುಗಳ ಸ್ಥಾನಪಲ್ಲಟವಾಗಿ ಐಸೊಓಲಿಯಿಕ್, ಐಸೋಲಿನೊಲಿಯಿಕ್ ಮತ್ತು ಐಸೊ ಲಿನೋಸಿಕ್ ಮುಂತಾದ ಆಮ್ಲಗಳು ರೂಪುಗೊಳ್ಳುವುವು.  ಮೂಲ ಆಮ್ಲಗಳಿಗಿಂತ ಇವುಗಳಿಗೆ ದ್ರವೀಕರಣ ಬಿಂದು ಹೆಚ್ಚು ಇರುವುದರಿಂದ ಹೆಪ್ಪುಗಟ್ಟುವ ಕ್ರಿಯೆಗೆ ಉತ್ತೇಜನ ದೊರೆತಂತಾಗುತ್ತದೆ.  ಈ ಆಮ್ಲಗಳ ಉತ್ಪತ್ತಿಯನ್ನು ಅತಿ ರಕ್ತ (ಇನ್‍ಫ್ರಾರೆಡ್) ಕಿರಣಗಳ ಸಹಾಯದಿಂದ ಪತ್ತೆಹಚ್ಚಬಹುದು. 
ಹತ್ತಿಬೀಜದ ಎಣ್ಣೆ ಪೂರ್ತಿಯಾಗಿ ಹೈಡ್ರೊಜನ್ನನ್ನು ಹೀರಿಕೊಳ್ಳುವಂತೆ ಮಾಡಿದರೆ 62o ಸೆಂ.ಗ್ರೇ. ಉಷ್ಣತೆಯಲ್ಲಿ ಕರಗುವ ಕೊಬ್ಬು ಲಭಿಸುತ್ತದೆ.  ಜಲಜನಕೀಕರಣದಿಂದ ಎಣ್ಣೆಯ ಭೌತ ಮತ್ತು ರಾಸಾಯನಿಕ ಲಕ್ಷಣಗಳೂ ಬದಲಾಯಿಸುವುವು.  ಅಂಥ ಎಣ್ಣೆಯನ್ನು ಬಹುಕಾಲ ಕೂಡಿಟ್ಟರೂ ಕೆಡುವುದಿಲ್ಲ.  ಜಲಜನಕೀಕರಣಕ್ಕಾಗಿ ಉಪಯೋಗಿಸುವ ಯಂತ್ರೋಪಕರಣದ ವಿವರಗಳನ್ನು ಚಿತ್ರದಲ್ಲಿ ಕಾಣಬಹುದು. 
ಎಣ್ಣೆಯನ್ನು ಅಪೂರ್ಣವಾಗಿ ಜಲಜನಕೀಕರಣ ಮಾಡಿದರೆ ವನಸ್ಪತಿ ತುಪ್ಪವಾಗುವುದು.  ಲಭ್ಯ ವಸ್ತು, ನಮ್ಮ ಶರೀರದ ಉಷ್ಣತಾ ಮಟ್ಟವಾದ 37o ಸೆಂ.ಗ್ರೇ. ನಲ್ಲಿ ಕರಗುವಂತಿರಬೇಕು.  ಇದಕ್ಕಿಂತ ಮೀರಿದ ಉಷ್ಣತೆಯಲ್ಲಿ ಕರಗುವ ಕೊಬ್ಬುಗಳು, ನಮ್ಮ ದೇಹದಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ.  ಭಾರತದಲ್ಲಿ ಕಡಲೇಕಾಯಿ ಎಣ್ಣೆಯಿಂದ ವನಸ್ಪತಿ ತುಪ್ಪ ತಯಾರಿಸುವುದು ವಾಡಿಕೆ.  ಪ್ರಕೃತಿದತ್ತ ಬೆಣ್ಣೆ ಅಥವಾ ತುಪ್ಪದಲ್ಲಿ ಂ ಜೀವಾತು ಇರುವುದರಿಂದ ವನಸ್ಪತಿಗೂ ಅದನ್ನು ಸೇರಿಸುತ್ತಾರೆ. 
ಕೊಬ್ಬಿನ ಆಮ್ಲಗಳ ಬೇರ್ಪಡೆ : ಕೊಬ್ಬಿನ ಜಲವಿಶ್ಲೇಷಣೆಯಿಂದ ಲಭಿಸುವ ಆಮ್ಲಗಳು ಸಮೀಪ ಸಂಬಂಧಿಗಳು.  ಅವುಗಳಲ್ಲಿರುವ ಇಂಗಾಲದ ಪರಮಾಣುಗಳ ಸಂಖ್ಯೆಯಲ್ಲಿರುವ ವ್ಯತ್ಯಾಸ ಅಲ್ಪ.  ಗುಣ ಹೋಲಿಕೆ ಹೆಚ್ಚು.  ಆದ್ದರಿಂದ ಪ್ರತ್ಯೇಕಿಸುವುದು ಕಷ್ಟ.  ಸ್ಥೂಲವರ್ಗಗಳಿಗೆ ಮಾತ್ರ ಬೇರ್ಪಡಿಸಬಹುದು. 
ಸಾಬೂನೀಕರಣದಲ್ಲಿ ಕೊಬ್ಬಿನ ಆಮ್ಲಗಳ ಸೋಡಿಯಂ ಅಥವಾ ಪೋಟ್ಯಾಸಿಯಂ ಲವಣಗಳು ದೊರೆಯುತ್ತವೆ.  ಇವುಗಳೊಡನೆ ಖನಿಜಾಮ್ಲಗಳು ವರ್ತಿಸುವಂತೆ ಮಾಡಿ ಆಮ್ಲಗಳನ್ನು ಬಿಡುಗಡೆಮಾಡಬಹುದು.  ಹತ್ತು ಅಥವಾ ಕಡಿಮೆ ಇಂಗಾಲದ ಪರಮಾಣುಗಳಿರುವ ಆಮ್ಲಗಳು ಹಬೆಯ ಬಾಷ್ಪೀಭವನದಿಂದ ಬೇರ್ಪಡುವುವು.  ಆದ್ದರಿಂದ ಮತ್ತಷ್ಟು ಸೂಕ್ಷ್ಮವಾಗಿ ವರ್ಗೀಕರಿಸಲು ಸಾಧ್ಯ.  ಉಗಿಯೊಡನೆ ಹಾಯದ ಆಮ್ಲಗಳಲ್ಲಿ ಕೆಲವು ಮಾತ್ರ ಪರ್ಯಪ್ತವಾಗಿರುತ್ತವೆ.  ಅವನ್ನು ಅಪರ್ಯಾಪ್ತ ಆಮ್ಲಗಳಿಂದ ವಿಂಗಡಿಸಲು ಆಯಾ ಸೀಸದ ಲವಣಗಳಿಗೆ ಮಾರ್ಪಡಿಸಲಾಗುವುದು.  ಅಪರ್ಯಾಪ್ತ ಆಮ್ಲಗಳ ಸೀಸದ ಲವಣಗಳು ಈಥರಿನಲ್ಲಿ ದ್ರಾವ್ಯ.  ಈ ತತ್ತ್ವಗಳನ್ನು ಆಧರಿಸಿ ಕೊಬ್ಬಿನ ಆಮ್ಲಗಳ ಬೇರ್ಪಡೆಗೆ ಕೆಳಕಂಡ ಕ್ರಮವನ್ನು ರೂಪಿಸಲಾಗಿದೆ. 
1 ಕೊಬ್ಬು ಅಥವಾ ತೈಲ+ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ → ಗ್ಲಿಸರಾಲ್ (ದ್ರವ)+ಎಲ್ಲ ಕೊಬ್ಬಿನ ಆಮ್ಲಗಳ ಸೋಡಿಯಂ ಲವಣಗಳು (ಘನವಸ್ತುಗಳು). 
2 ಸೋಡಿಯಂ ಲವಣಗಳು+ಸಲ್ಫ್ಯೂರಿಕ್ ಆಮ್ಲ → ಕೊಬ್ಬಿನ ಆಮ್ಲಗಳು (ಕೆಲವು ದ್ರಾವ್ಯ; ಉಳಿದವು ಅದ್ರಾವ್ಯ)+ಸೋಡಿಯಂ ಸಲ್ಫೇಟ್ ದ್ರಾವಣ
3 ಕೊಬ್ಬಿನ ಆಮ್ಲಗಳ ಮತ್ತು ಸೋಡಿಯಂ ಸಲ್ಫೇಟಿನ ದ್ರಾವಣದ ಮಿಶ್ರಣವನ್ನು ಉಗಿಹಾಯಿಸಿ ಕುದಿಸಲಾಗುವುದು. 
(ಚಿ) ಉಗಿಯೊಡನೆ ಹಾಯುವ ಅಂಶ
(i) ನೀರಿನಲ್ಲಿ ದ್ರಾವ್ಯ 	...	ಬ್ಯುಟಿರಿಕ್ ಆಮ್ಲ
(ii) ನೀರಿನಲ್ಲಿ ಅದ್ರಾವ್ಯ	...	ಕೆಪ್ರೋಯಿಕ್ ಕೆಪ್ರಿಲಿಕ್ ಮತ್ತು ಕ್ಯಾಪ್ರಿಕ್ ಆಮ್ಲಗಳು. 
	
(b) ಉಗಿಯೊಡನೆ ಹಾಯದ ಅಂಶ
ಇದಕ್ಕೆ ಈಥರ್ ಮತ್ತು ಸೀಸದ ಅಸಿಟೇಟ್ ದ್ರಾವಣ ಸೇರಿಸಿದರೆ ಒತ್ತರ ಬರುವುದು.  ಶೋಧಿಸಿದರೆ ಸೀಸದ ಲವಣಗಳು ಬೇರ್ಪಡುವುವು. 
(i) ಈಥರಿನಲ್ಲಿ ದ್ರಾವ್ಯವಾದ ಸೀಸದ ಲವಣಗಳು   ... ಓಲಿಯಿಕ್ ಮತ್ತು ಇತರ ಅಪರ್ಯಾಪ್ತ 
  ಆಮ್ಲಗಳು.
(ii) ಈಥರಿನಲ್ಲಿ ಅದ್ರಾವ್ಯವಾದ ಸೀಸದ ಲವಣಗಳು ...  ಸ್ಟಿಯರಿಕ್, ಪಾಮಿಟಿಕ್ ಮೊದಲಾದ ಪರ್ಯಾಪ್ತ
							   ಆಮ್ಲಗಳು. 

4 ಹೈಡ್ರೊಜನ್ ಸಲ್ಫೈಡ್ ಹಾಯಿಸಿದರೆ ಸೀಸದ ಸಲ್ಫೈಡ್ ಒತ್ತರಿಸಿ ಕೊಬ್ಬಿನ ಆಮ್ಲಗಳು ಬಿಡುಗಡೆಯಾಗುವುವು.  ಮಿಶ್ರಣವನ್ನು ಈಥರಿನಿಂದ ಸಂಸ್ಕರಿಸಿದರೆ ಆಮ್ಲಗಳು ಮಾತ್ರ ಕರಗುವುವು.  ದ್ರಾವಣವನ್ನು ಬೇರ್ಪಡಿಸಿ ಈಥರನ್ನು ಆವಿಯಾಗಲು ಬಿಟ್ಟರೆ ಆಮ್ಲ ಉಳಿಯುವುದು.  ಪರ್ಯಾಪ್ತ ಆಮ್ಲಗಳು ಘನರೂಪದಲ್ಲಿಯೂ ಅಪರ್ಯಾಪ್ತ ಆಮ್ಲಗಳು ದ್ರವಸ್ಥಿತಿಯಲ್ಲಿಯೂ ಇರುವುದರಿಂದ ಪ್ರತ್ಯೇಕಿಸುವುದು ಸುಲಭ. 
ಕೊಬ್ಬಿನ ವಿಶ್ಲೇಷಣೆ: ಸಾಬೂನಿಕರಣ ಮೌಲ್ಯ (ಸಪೋನಿಫಿಕೇಶನ್ ವ್ಯಾಲ್ಯೂ) : 1 ಗ್ರಾಂ ಕೊಬ್ಬನ್ನು ಅಥವಾ ಎಣ್ಣೆಯನ್ನು ಸಂಪೂರ್ಣವಾಗಿ ಸಾಬೂನೀಕರಿಸಲು ಅಗತ್ಯವಾದ ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ಮಿಲಿಗ್ರಾಂ ತೂಕ ಅದರ ಸಾಬೂನೀಕರಣ ಮೌಲ್ಯ. 
ನಿರ್ದಿಷ್ಟ ತೂಕ ಕೊಬ್ಬನ್ನು ಅಗತ್ಯಕ್ಕಿಂತ ಹೆಚ್ಚು ಪ್ರಮಾಣ ಶಿಷ್ಟ (ಪ್ರಬಲತೆ ಗೊತ್ತಿರುವ) ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣದೊಡನೆ ಕುದಿಸಲಾಗುವುದು.  ಆಗ ಕೊಬ್ಬು ಕ್ಷಾರದ ಒಂದು ಭಾಗವನ್ನು ತನ್ನ ಜಲವಿಶ್ಲೇಷಣೆಗೆ ಉಪಯೋಗಕೊಳ್ಳುವುದು.  ಉಳಿದ ಕ್ಷಾರವನ್ನು ಶಿಷ್ಟ ಆಮ್ಲದೊಂದಿಗೆ ಫೀನಾಲ್ಫ್‍ಥ್ಯಾಲೀನ್ ಸೂಚಕದ ಸಹಾಯದಿಂದ ಅನುಮಾಪನ ಮಾಡಲಾಗುವುದು.  ಅನಂತರ ಕೊಬ್ಬಿನ ಸಾಬೂನೀಕರಣ ಮೌಲ್ಯವನ್ನು ಗುಣಿಸಬಹುದು.  ಟ್ರೈಬ್ಯುಟಿರಿನ್ ಉದಾಹರಣೆಯಾಗಿ ಇಟ್ಟುಕೊಂಡು ಮಾಡಿದ ಲೆಕ್ಕಾಚಾರದ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. 

ಚಿತ್ರ-7

ಹೀಗೆ 302.36 ಗ್ರಾಂ ಟ್ರೈಬ್ಯುಟರಿನ್ನನ್ನು ಜಲವಿಶ್ಲೇಷಣೆ ಮಾಡಲು 168.3 ಗ್ರಾಂ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಬೇಕಾಗಿದೆ.  ಆದ್ದರಿಂದ 1 ಗ್ರಾಮನ್ನು ಜಲವಿಶ್ಲೇಷಣೆ ಮಾಡಲು 557 ಮಿ.ಗ್ರಾಂ. ಬೇಕಾಗುತ್ತದೆ.  ಹೀಗೆ ಟ್ರೈಬ್ಯೂಟೆರಿನ್ನಿನ ಸಾಬೂನೀಕರಣ ಮೌಲ್ಯ 557.
ಅಯೊಡೀನ್ ಮೌಲ್ಯ : 	ಗ್ಲಿಸರೈಡಿನಲ್ಲಿರುವ ಒಂದೊಂದು ದ್ವಿಬಂಧವೂ ತಲಾ ಎರಡು ಅಯೊಡೀನ್ ಪರಮಾಣುಗಳನ್ನು ಕೂಡಿಸಿಕೊಂಡು ಪರ್ಯಾಪ್ತಗೊಳ್ಳಬಲ್ಲದು.  ಒಂದು ದ್ವಿಬಂಧವಿರುವ ಓಲಿಯಿಕಾಮ್ಲದ ಗ್ಲಿಸರೈಡಿಗಿಂತ ಎರಡು ದ್ವಿಬಂಧವಿರುವ ಲಿನೊಲಿಯಿಕಾಮ್ಲದ ಗ್ಲಿಸರೈಡು,  ಎರಡು ಪಟ್ಟು ಅಯೊಡೀನ್ ಹೀರಿಕೊಳ್ಳುವುದು ಸಹಜವೇ.  100ಗ್ರಾಂ ಕೊಬ್ಬು ಅಥವಾ ಎಣ್ಣೆ ಹೀರಿ ಕೊಳ್ಳುವ ಅಯೊಡೀನ್ (ಗ್ರಾಂನಲ್ಲಿ) ಅದರ ಅಯೊಡೀನ್ ಮೌಲ್ಯ.   ಇದು ಕೊಬ್ಬು ಅಥವಾ ಎಣ್ಣೆಯ ಅಪರ್ಯಾಪ್ತತೆಯ ದ್ಯೋತಕವಾಗಿದೆ.  ಟ್ರೈಸ್ಟಿಯರಿನ್ನಿನಂಥ ಪರ್ಯಾಪ್ತ ಗ್ಲಿಸರೈಡುಗಳು ಕೂಡಿಸಿಕೊಳ್ಳುವುದಿಲ್ಲ.  ಆದ್ದರಿಂದ ಅವುಗಳ ಅಯೊಡೀನ್ ಮೌಲ್ಯ ಸೊನ್ನೆ.  ಶುದ್ಧ ಅಪರ್ಯಾಪ್ತ ಎಣ್ಣೆಯಾದ ಗ್ಲಿಸರೈಲ್ ಟ್ರೈ ಓಲಿಯೇಟಿನ ಅಯೊಡೀನ್ ಮೌಲ್ಯವನ್ನು ಮುಂದೆ ತಾತ್ತ್ವಿಕವಾಗಿ ಗುಣಿಸಲಾಗಿದೆ. 

ಚಿತ್ರ-8

ಆದ್ದರಿಂದ ಅಯೊಡೀನ್ ಮೌಲ್ಯ=86.88.  ಹೋಲಿಕೆಗಾಗಿ ಮೂರು ಸರಳ ಗ್ಲಿಸರೈಡುಗಳ ಅಯೊಡೀನ್ ಮೌಲ್ಯವನ್ನು ಮುಂದೆ ಸೂಚಿಸಲಾಗಿದೆ. 

ಚಿತ್ರ-9

ಅಯೊಡೀನ್ ಬದಲು ಅಯೊಡೀನ್ ಮಾನೊಕ್ಲೋರೈಡನ್ನು (IಅI) ಉಪಯೋಗಿಸಿದರೆ ಪರ್ಯಾಪ್ತವಾಗುವಿಕೆ ಬೇಗ ನಡೆಯುವುದು.  ಈ ಕ್ರಿಯೆಯನ್ನು ಕೆಳಕಂಡ ಸಮೀಕರಣ ಸೂಚಿಸುತ್ತದೆ. 
	(-ಅಊ=ಅಊ-)+IಅI→(-ಅಊI-ಅಊಅI--)
ದ್ವಿಬಂಧದಲ್ಲಿ, ತಲಾ ಒಂದು ಅಯೊಡೀನ್ ಮತ್ತು ಕ್ಲೋರಿನ್ ಪರಮಾಣು ಸೇರುವುದು.  ಅಯೊಡೈಡುಗಳಿಂದ ಒಂದು ಅಯೊಡೀನ್ ಪರಮಾಣುವನ್ನು ಪಲ್ಲಟಿಸಲು ಒಂದು ಕ್ಲೋರಿನಿನ ಪರಮಾಣು ಸಾಕು.  ಆದ್ದರಿಂದ ಇಲ್ಲೂ ಅಯೊಡೀನ್ ಮೌಲ್ಯವನ್ನೇ ಗುಣಿಸಲಾಗುವುದು.  ನಿರ್ದಿಷ್ಟ ತೂಕ ತೈಲವನ್ನು ಇಂಗಾಲದ ಟೆಟ್ರಕ್ಲೋರೈಡಿನಲ್ಲಿ ವಿಲೀನಗೊಳಿಸಿ ದ್ರಾವಣ ಮಾಡಿಕೊಳ್ಳಬೇಕು.  ಹಾಗೆಯೇ ಅಯೊಡೀನ್ ಮಾನೊಕ್ಲೋರೈಡನ್ನು ಗ್ಲೇಷಿಯಲ್ ಅಸಿಟಕಾಮ್ಲದಲ್ಲಿ ವಿಲೀನ ಮಾಡುವರು. ಗೊತ್ತಾದ ಗಾತ್ರದ ಇದರ ದ್ರಾವಣವನ್ನು ಎಣ್ಣೆಯ ದ್ರಾವಣಕ್ಕೆ ಸೇರಿಸಿ ಕೆಲಕಾಲ ಬಿಡಬೇಕು.  ಆಗ ಎಣ್ಣೆ ತನ್ನ ಶಕ್ತ್ಯನುಸಾರ ಅಯೊಡೀನ್ ಮಾನೋಕ್ಲೋರೈಡನ್ನು ಹೀರುವುದು.  ಹೆಚ್ಚುವರಿ ಅಯೊಡೀನ್ ದ್ರಾವಣದಲ್ಲಿ ಉಳಿದಿರುತ್ತದೆ.  ಇದಕ್ಕೆ ಪೊಟ್ಯಾಸಿಯಂ ಅಯೊಡೈಡಿನ ದ್ರಾವಣ ಹಾಕಿ ಶಿಷ್ಟ ಸೋಡಿಯಂ ಥಯೊಸಲ್ಫೇಟಿನೊಡನೆ ಪಿಷ್ಟ (ಸ್ಟಾರ್ಚ್) ಸೂಚಕದ ಸಹಾಯದಿಂದ ಅನುಮಾಪನ ಮಾಡಬಹುದು.  ಇಲ್ಲಿ ನಡೆಯುತ್ತಿರುವ ರಾಸಾಯನಿಕ ಕ್ರಿಯೆಗಳು ಹೀಗಿವೆ. 
        
ಅಯೊಡೀನ್ ಮೌಲ್ಯದ ಆಧಾರದ ಮೇಲೆ ಎಣ್ಣೆಯನ್ನು ಮೂರು ಪ್ರಧಾನ ಗುಂಪುಗಳಾಗಿ ವಿಂಗಡಿಸುವರು. 
ಒಣಗದ ಎಣ್ಣೆಗಳು : ಇವುಗಳ ಅಯೊಡೀನ್ ಮೌಲ್ಯ 90ಕ್ಕಿಂತ ಕಡಿಮೆ.  ಗಾಳಿಗೆ ಒಡ್ಡಿದಾಗ ಒಣಗುವುದಿಲ್ಲ.  ಇವುಗಳಲ್ಲಿರುವ ಪ್ರಧಾನ ಅಂಶ ಒಲಿಯಿಕ್ ಆಮ್ಲ.   ಆಲಿವ್, ಕೊಬ್ಬರಿ, ಕಡಲೆಕಾಯಿ ಮತ್ತು ಹರಳೆಣ್ಣೆಗಳು ಈ ಗುಂಪಿಗೆ ಸೇರಿದ ಎಣ್ಣೆಗಳು.
ಅರೆ ಒಣಗುವ ಎಣ್ಣೆಗಳು : ಇವು ಮುಖ್ಯವಾಗಿ  ಓಲಿಯಿಕ್ ಮತ್ತು ಲಿನೋಲಿಯಿಕ್ ಆಮ್ಲ ಭಾಗಗಳಿರುತ್ತವೆ. ಇವುಗಳ ಅಪರ್ಯಾಪ್ತತೆ ಹೆಚ್ಚಾಗಿದ್ದು ಅಯೊಡೀನ್ ಮೌಲ್ಯ 90-120 ಮಿತಿಯಲ್ಲಿರುತ್ತದೆ.  ಗಾಳಿಯ ಸಂಪರ್ಕದಲ್ಲಿ ಅವು ಒಣಗುವುದು ನಿಧಾನ. ಹತ್ತಿಬೀಜದ ಮತ್ತು ಎಳ್ಳೆಣ್ಣೆ ಈ ವರ್ಗದ ಪ್ರಮುಖ ಎಣ್ಣೆಗಳು.
ಒಣಗುವ ಎಣ್ಣೆಗಳು : ಇವುಗಳ ಅಯೊಡೀನ್ ಮೌಲ್ಯ 120ಕ್ಕಿಂತ ಹೆಚ್ಚಾಗಿರುವುದು.  ಇವುಗಳಲ್ಲಿ ಲಿನೊಲಿಯಿಕ್ ಮತ್ತು ಲಿನೊಲಿನಿಕ್ ಆಮ್ಲಗಳ ಪ್ರಮಾಣ ಅಧಿಕ.  ಅಗಸೆ, ಗಸಗಸೆ ಮತ್ತು ಟಂಗ್ ಎಣ್ಣೆಗಳು ಇವುಗಳಲ್ಲಿ ಮುಖ್ಯವಾದವು.  ತೆಳುವಾಗಿ ಲೇಪಿಸಿದಾಗ ಗಾಳಿಯ ಸಂಪರ್ಕದಲ್ಲಿ ಮೊದಲು ಅಂಟಾದರೂ ಕ್ರಮೇಣ ಶುಷ್ಕವಾದ ಸುಭದ್ರ ಪೊರೆಯ ರಚನೆಯುಂಟಾಗುವುದು.  ಅಗಸೆ ಎಣ್ಣೆ ಪ್ರಧಾನವಾಗಿ ಪೆಯಿಂಟುಗಳಲ್ಲಿ ಬಳಕೆಯಾಗುತ್ತದೆ.  ಇಂಥ ಎಣ್ಣೆಗಳನ್ನು ಒಳಗೊಂಡ ಪೆಯಿಂಟ್ ಮತ್ತು ವಾರ್ನಿಷುಗಳನ್ನು ಲೇಪಿಸುವುದು ಸುಲಭ.  ಅಲ್ಲದೆ ಒಣಗಿದ ಮೇಲೆ ಬಲವಾದ ಸಾವಯವ ಪದರ ಏರ್ಪಡುವುದು.  ಆ ಪದರದ ಮೂಲಕ ಬಣ್ಣ ಸಮನಾಗಿ ಹಂಚಿಹೋಗುವುದು.  ಸೀಸ ಅಥವಾ ಮ್ಯಾಂಗನೀಸ್ ಲವಣಗಳು ಈ ಒಣಗುವ ಕ್ರಿಯೆಯನ್ನು ತ್ವರಿತಗೊಳಿಸುತ್ತವೆ.  ಲೋಹದ ಆಕ್ಸೈಡ್ ಬೆರೆಸಿ ಕಾಯಿಸಿ ತಯಾರಿಸಿದ ಅಗಸೆ ಎಣ್ಣೆಗೆ ಕುದಿಸಿದ ಅಗಸೆ ಎಣ್ಣೆ ಎನ್ನುವರು.  ಇದನ್ನೊಳಗೊಂಡ ಪೆಯಿಂಟ್ ಬಲು ಬೇಗ ಒಣಗುವುದು.  ಉತ್ತಮ ಒಣಗುವ ಎಣ್ಣೆಯ ಮುಖ್ಯ ಲಕ್ಷಣಗಳೆಂದರೆ (i) ಎರಡು ಅಥವಾ ಮೂರು ದ್ವಿಬಂಧಗಳಿರುವ ಆಮ್ಲದ ಗ್ಲಿಸೆರೈಡುಗಳನ್ನು ಹೊಂದಿರುವುದು.  (ii) ಆಮ್ಲದ ಇಂಗಾಲದ ಸರಣಿಯಲ್ಲಿ ಕ್ರಮವಾಗಿ ಎರಡು ದ್ವಿಬಂಧಗಳ ನಡುವೆ ಒಂದು ಏಕಬಂಧವಿರುವುದು.  ಆಗ ಆ ಎಣ್ಣೆಗೆ ಆಕ್ಸಿಜನ್ ಹೀರುವ ಶಕ್ತಿ ಪ್ರಾಪ್ತಿಯಾಗಿ ಬೇಗನೆ ಒಣಗುತ್ತದೆ.  ಕ್ರಮವರಿತ (ಕಾಂಜುಗೇಟೆಡ್) ದ್ವಿಬಂಧವಿರುವ ಟಂಗ್ ಎಣ್ಣೆ (ಅ. ಮೌ. 160)  ಅಗಸೆ ಎಣ್ಣೆಗಿಂತ (ಅ. ಮೌ. 175) ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ.  ಅಗಸೆ ಎಣ್ಣೆಯ ಉತ್ಪಾದನೆಯಲ್ಲಿ ಭಾರತ ತೃತೀಯ ಸ್ಥಾನ ಪಡೆದಿದೆ.  ಮೇಣಗಪಟ (ಆಯಿಲ್ ಕ್ಲಾತ್), ರೆಕ್ಸಿನ್ ಮತ್ತು ಲಿನೋನಿಯಂ ತಯಾರಿಕೆಯಲ್ಲಿ ಈ ಎಣ್ಣೆಗಳ ಪಾತ್ರವಿದೆ.  ಉದಾಹರಣೆಗೆ ಕಾರ್ಕನ್ನು ಪುಡಿಮಾಡಿ ಕುದಿಸಿದ ಅಗಸೆ ಎಣ್ಣೆಯೊಡನೆ ಬೆರೆಸಿ ಮಿಶ್ರಣವನ್ನು ಪದರಗಳಾಗಿ ಒತ್ತಿ ಒಣಗಿಸಿದರೆ ಲಿನೋಲಿಯಂ ಆಗುತ್ತದೆ. 
ರೈಷೆರ್ಟ್-ಮೈಸ್ಲ್ ಮೌಲ್ಯ : 5 ಗ್ರಾಂ ಕೊಬ್ಬಿನಿಂದ ಪಡೆಯಬಹುದಾದ ದ್ರಾವ್ಯ ಹಾಗೂ ಉಗಿಯೊಡನೆ ಹಾಯುವ ಕೊಬ್ಬಿನ ಆಮ್ಲಗಳನ್ನು ತಟಸ್ಥಗೊಳಿಸಲು ಅಗತ್ಯವಾದ ಡೆಸಿನಾರ್ಮಲ್ ಪ್ರಬಲತೆಯ ಕ್ಷಾರದ ಗಾತ್ರವನ್ನು ಮಿಲಿಮೀಟರುಗಳಲ್ಲಿ ಸೂಚಿಸುವ ಸಂಖ್ಯೆ.  ಇದರ ನಿರ್ಣಯ ವಿಧಾನ ಹೀಗಿದೆ.  ನಿರ್ದಿಷ್ಟ ತೂಕ ಕೊಬ್ಬನ್ನು ಗ್ಲಿಸರಾಲ್ ಮಾಧ್ಯಮದಲ್ಲಿ ಪೊಟ್ಯಾಸಿಯಂ ಹೈಡ್ರಾಕ್ಸೈಡಿನೊಂದಿಗೆ ಕಾಯಿಸಿ ಜಲವಿಶ್ಲೇಷಣೆಗೊಳಿಸಲಾಗುವುದು.  ಮಿಶ್ರಣಕ್ಕೆ ದುರ್ಬಲ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿದರೆ ಕೊಬ್ಬಿನ ಆಮ್ಲಗಳು ಬಿಡುಗಡೆಯಾಗುವುವು.  ಕುದಿಸಿದಾಗ 10 ಇಂಗಾಲದ ಪರಮಾಣುಗಳ ವರೆಗೆ ಹೊಂದಿರುವ ಆಮ್ಲಗಳೆಲ್ಲ ಉಗಿಯೊಡನೆ ಆವಿಯಾಗಿ ಹೋಗುವುವು. ಇವು ಸಾಂದ್ರೀಕರಿಸಿದ ದ್ರವದಲ್ಲಿರುವುವು. ಇವುಗಳ ಪೈಕಿ 4 ಇಂಗಾಲದ ಪರಮಾಣುಗಳಿರುವ ಬ್ಯುಟಿರಿಕ್ ಆಮ್ಲ ನೀರಿನಲ್ಲಿ ದ್ರಾವ್ಯ, ಕ್ರಮವಾಗಿ 6, 8, 10  ಇಂಗಾಲದ ಪರಮಾಣುಗಳಿರುವ ಬ್ಯುಟಿರಿಕ್ ಆಮ್ಲ ನೀರಿನಲ್ಲಿ ದ್ರಾವ್ಯ. ಕ್ರಮವಾಗಿ, 6,8,10 ಇಂಗಾಲದ ಪರಮಾಣುಗಳಿರುವ  ಕೆಪ್ರೋಯಿಕ್, ಕೆಪ್ರಿಲಿಕ್ ಮತ್ತು ಕ್ಯಾಪ್ರಿಕ್ ಆಮ್ಲಗಳು ನೀರಿನಲ್ಲಿ ಅದ್ರಾವ್ಯ.  ಬಟ್ಟಿ ಇಳಿದ ದ್ರವವನ್ನು ಶೋಧಿಸಿದರೆ ಈ ಆಮ್ಲಗಳು ಬೇರ್ಪಡುವುವು.  ಶೋಧಿತ ದ್ರವದಲ್ಲಿರುವ ಬ್ಯುಟಿರಿಕ್ ಆಮ್ಲದ ಪ್ರಮಾಣವನ್ನು ಡೆಸಿನಾರ್ಮಲ್ ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ವಿರುದ್ಧ ಫಿನಾಫ್ತಲೀನ್ ಸೂಚಕದ ನೆರವಿನಿಂದ ಅನುಮಾಪನ ಮಾಡಿ ನಿರ್ಣಯಿಸಲಾಗುವುದು. 
ಪೊಲೆನ್ಸ್ಕೆ ಮೌಲ್ಯ : ರೈಷೆರ್ಟ್-ಮೈಸ್ಲ್ ಮೌಲ್ಯದಂತೆಯೇ ಇದನ್ನೂ ನಿರ್ಧರಿಸಲಾಗುವುದು.  ಆದರೆ ಇಲ್ಲಿ ಉಗಿಯೊಂದಿಗೆ ಬೇರ್ಪಟ್ಟ ಅದ್ರಾವ್ಯ ಆಮ್ಲಗಳನ್ನು ಆಲ್ಕೊಹಾಲಿನಲ್ಲಿ ವಿಲೀನಮಾಡಿ ಡೆಸಿನಾರ್ಮಲ್ ಕ್ಷಾರದೊಂದಿಗೆ ಅನುಮಾಪನ ಮಾಡುತ್ತೇವೆ.  ಅಷ್ಟೇ ವ್ಯತ್ಯಾಸ.  ಆದ್ದರಿಂದ 5 ಗ್ರಾಂ ಕೊಬ್ಬಿನಿಂದ ಪಡೆಯಬಹುದಾದ ಉಗಿಯೊಡನೆ ಆವಿಯಾಗುವ ಅದ್ರಾವ್ಯ ಕೊಬ್ಬಿನ ಆಮ್ಲಗಳನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲು ಅಗತ್ಯವಾದ ಡೆಸಿನಾರ್ಮಲ್ ಕ್ಷಾರದ ಗಾತ್ರವನ್ನು ಮಿಲಿ ಲೀಟರ್‍ಗಳಲ್ಲಿ ಸೂಚಿಸುವ ಸಂಖ್ಯೆಗೆ ಅದರ ಪೊಲೆನ್ಸ್ಕೆ ಮೌಲ್ಯ ಎಂದು ಹೆಸರು. 
ರೈಷೆರ್ಟ್-ಮೈಸ್ಲ್ ಮತ್ತು ಪೊಲೆನ್ಸ್ಕೆ ಮೌಲ್ಯಗಳ ಸಹಾಯದಿಂದ ಬೆಣ್ಣೆ ಮತ್ತು ತುಪ್ಪಗಳೊಡನೆ ಇತರ ವಸ್ತುಗಳು ಕಲಬೆರೆಕೆಯಾಗಿದ್ದರೆ, ಸುಲಭವಾಗಿ ಗುರುತಿಸಬಹುದು. 

ಕೊಬ್ಬು ಅಥವಾ ಎಣ್ಣೆ
ರೈಷೆರ್ಟ್-ಮೈಸ್ಲ್ ಮೌಲ್ಯ
ಪೊಲೆನ್ಸ್ಕೆ ಮೌಲ್ಯ

ಬೆಣ್ಣೆ
19-36
1.50

ತುಪ್ಪ (ಎಮ್ಮೆ)
<30
1--1.75

ತುಪ್ಪ (ಹಸು)
<24
1.25--2.50

ಕೊಬ್ಬರಿ ಎಣ್ಣೆ
7
15--18

ಮಾರ್ಗರಿನ್ 
<1
<1

ವನಸ್ಪತಿ
ಜಲಜನಕೀಕರಿಸಿದ ಎಣ್ಣೆ) 
>1
<1

ಬೆಣ್ಣೆಯಲ್ಲಿ ಟ್ರೈಬ್ಯುಟಿರಿನ್ ಇದೆ.  ಜಲವಿಶ್ಲೇಷಣೆ ಹೊಂದಿದಾಗ ಇದು ಬ್ಯುಟಿರಿಕ್ ಆಮ್ಲವನ್ನು ಕೊಡುತ್ತದೆ.  ಆದ್ದರಿಂದ ಬೆಣ್ಣೆ ಮತ್ತು ಅದರಿಂದಾದ ತುಪ್ಪಕ್ಕೆ ರೈಷೆರ್ಟ್-ಮೈಸ್ಲ್ ಮೌಲ್ಯ ಹೆಚ್ಚಾಗಿರುವುದು ಸ್ವಾಭಾವಿಕ.  ಟ್ರೈಬ್ಯುಟಿರಿನ್ ಅಂಶವಿಲ್ಲದಿರುವ ಪ್ರಾಣಿಗಳ ಕೊಬ್ಬು ಅಥವಾ ವನಸ್ಪತಿಗಳಿಗೆ ಈ ಮೌಲ್ಯ ಕಡಿಮೆ.  ತುಪ್ಪದೊಡನೆ ವನಸ್ಪತಿ ಬೆರೆಕೆಯಾಗಿದ್ದರೆ ರೈಷೆರ್ಟ್-ಮೈಸ್ ಮೌಲ್ಯ 24ಕ್ಕಿಂತ ಕಡಿಮೆ ಆಗಿರುವುದು.  ಬೆಣ್ಣೆಗೆ ಕೊಬ್ಬರಿ ತುಪ್ಪ ಸೇರಿಸಿದ್ದರೆ ಮಿಶ್ರಣದ ಪೊರೆನ್ಸ್ಕೆ ಮೌಲ್ಯ ಬೆಣ್ಣೆಗಿಂತ ಹೆಚ್ಚಾಗಿರುತ್ತದೆ. 
ಸಂಯೋಜಿತ ಕೊಬ್ಬು : ಪ್ಯಾರಫಿನ್ ಮೇಣವನ್ನು ಸೋಡಿಯಂ ಕಾರ್ಬೊನೇಟಿನ ದ್ರಾವಣದೊಡನೆ ಒತ್ತಡದಲ್ಲಿ ಸುಮಾರು 170ಲಿ ಸೆಂ.ಗ್ರೇ. ಉಷ್ಣತೆಗೆ ಕಾಯಿಸಿ ಗಾಳಿ ಹಾಯಿಸಿದರೆ ಬೆಸ ಸಂಖ್ಯೆಯ ಇಂಗಾಲದ ಪರಮಾಣುಗಳಿರುವ (ಅ13-ಅ19). ಕೊಬ್ಬಿನ ಆಮ್ಲಗಳು ಉತ್ಪತ್ತಿಯಾಗುವುವು.  ಈ ಕ್ರಿಯೆಗೆ ಸೀಸ, ಮ್ಯಾಂಗನೀಸ್ ಮತ್ತು ವೆನೇಡಿಯಂ ಲೋಹಗಳು ವೇಗವರ್ಧಕಗಳಾಗಿ ವರ್ತಿಸುತ್ತವೆ.  ಒಂದನೆಯ ಮಹಾಯುದ್ಧದ ಸಮಯದಲ್ಲಿ (1914-18) ಜರ್ಮನಿಗೆ ವಿದೇಶಗಳಿಂದ ಎಣ್ಣೆಬೀಜಗಳ ಸರಬರಾಜು ಕಡಿದುಹೋಯಿತು.  ಆಗ ಉಂಟಾದ ಎಣ್ಣೆಯ ಕೊರತೆಯನ್ನು ನೀಗಲು ಆ ದೇಶ ಈ ವಿಧಾನವನ್ನು ರೂಪಿಸಿತು.  ಗ್ಲಿಸರಾಲನ್ನು ಫರ್ಮೆಂಟೇಷನ್ ವಿಧಾನದಿಂದ ಮಾಡಿಕೊಂಡು ಅದನ್ನು ಕೊಬ್ಬಿನ ಆಮ್ಲಗಳೊಂದಿಗೆ ಮೊಹರಾದ ಕೊಳವೆಗಳಲ್ಲಿ 200ಲಿ-260ಲಿ ಸೆಂ.ಗ್ರೇ.  ಉಷ್ಣತಾ ಮಿತಿಯಲ್ಲಿ ಕಾಯಿಸಿದರೆ ಕೊಬ್ಬು ದೊರೆಯುವುದು.  ಮಾನೊ, ಡೈ ಮತ್ತು ಟ್ರೈಗ್ಲಿಸರೈಡುಗಳನ್ನು ಹೀಗೆ ಪಡೆಯಬಹುದು.  ವರ್ಷವೊಂದಕ್ಕೆ ಪ್ರತಿಯೊಬ್ಬನೂ 3-4 ಕಿ.ಗ್ರಾಂ. ಕೊಬ್ಬನ್ನು ಮಲದೊಡನೆ ವಿಸರ್ಜಿಸುವನೆಂದು ಅಂದಾಜು ಮಾಡಲಾಗಿದೆ.  ತನ್ನ ದೊಡ್ಡ ನಗರಗಳ ಗ್ರಾಮಸಾರದಲ್ಲಿ ವ್ಯರ್ಥವಾಗಿ ಹೋಗುತ್ತಲಿದ್ದ ಇಂಥ ಕೊಬ್ಬನ್ನು ಸಹ ಜರ್ಮನಿ ಆಗ ಸಂಸ್ಕರಿಸಿ ಸಂಪಾದಿಸಿತು.  ಎರಡನೆಯ ಮಹಾ ಯುದ್ಧದ ಕಾಲದಲ್ಲಿ ಜರ್ಮನಿ ಫಿಷರ್-ಟ್ರೋಷ್ ವಿಧಾನದಿಂದ ಕೊರೆತ ಹೈಡ್ರೊಕಾರ್ಬನ್ನುಗಳನ್ನು ಉತ್ಕರ್ಷಿಸಿ ಆಮ್ಲಗಳನ್ನಾಗಿ ಮಾಡಿಕೊಂಡು ಅವುಗಳಿಂದ ಕೊಬ್ಬನ್ನು ಸಂಯೋಜಿಸಿತು. 
ಕೊಬ್ಬಿನ ಮಹತ್ತ್ವ : ಇವು ಶಕ್ತಿದಾತ ಆಹಾರಾಂಶಗಳು.  ಒಂದು ಗ್ರಾಂ ಕೊಬ್ಬಿನ ದಹನದಿಂದ 9,500 ಕೆಲೊರಿಗಳಷ್ಟು ಶಕ್ತಿ ನಮಗೆ ಉಷ್ಣದ ರೂಪದಲ್ಲಿ ಲಭ್ಯವಾಗುತ್ತದೆ.   ಅದೇ ಒಂದು ಗ್ರಾಂ ಸಸಾರಜನಕ ಅಥವಾ ಶರ್ಕರ ಪಿಷ್ಟಾದಿಗಳಿಂದ ಕೇವಲ 4,000  ಕೆಲೊರಿಗಳಷ್ಟು ಶಕ್ತಿ ಉತ್ಪಾದನೆಯಾಗುತ್ತದೆ.  ಕೊಬ್ಬಿಗೆ ಉಷ್ಣವಾಹಕ ಗುಣ ಕಡಿಮೆ.  ಆದ್ದರಿಂದ ನಮ್ಮ ಶರೀರದಿಂದ ಉಷ್ಣ ಹೊರಬೀಳುವುದನ್ನು ಇದು ತಡೆಗಟ್ಟುತ್ತದೆ.  ಶೀತಹವೆಯಲ್ಲಿ ಅಥವಾ ತಣ್ಣೀರಿನಲ್ಲಿ ವಾಸಿಸುವ ಕರಡಿ ಮತ್ತು ತಿಮಿಂಗಲಗಳ ಚರ್ಮದ ಅಡಿಯಲ್ಲಿ ಅಗಾಧಪ್ರಮಾಣದ ಕೊಬ್ಬಿನ ಸಂಗ್ರಹವಿದ್ದು, ಅವುಗಳ ದೇಹದಿಂದ ಉಷ್ಣ ನಷ್ಟವಾಗದಂತೆ ರಕ್ಷಿಸುತ್ತದೆ.  ಜೇನು ಗೂಡಿನಲ್ಲಿ ಶೇಖರಿಸುವ ಸಕ್ಕರೆಯ ಪಾಕ ಜಲಮಿಶ್ರಿತವಾಗದಂತೆ ಅಥವಾ ಕಲುಷಿತವಾಗದಂತೆ, ಅದರಲ್ಲಿರುವ ಮೇಣ ನೋಡಿಕೊಳ್ಳುತ್ತದೆ.  ಕೊಬ್ಬಿನ ಅಥವಾ ಮೇಣದ ಹೊದಿಕೆಯಿರುವ ಎಲೆಗಳಿಂದ ನೀರು ನಷ್ಟವಾಗುವುದಿಲ್ಲ.  ಅವುಗಳಿಗೆ ನೀರು ಕಂದುವುದೂ ಇಲ್ಲ.  ಸೇಬು ಮತ್ತು ಸಿಟ್ರಸ್ ಜಾತಿಯ ಹಣ್ಣುಗಳಿಗೆ ಇಂಥ ಮೇಣದ ಕವಚವಿರುತ್ತದೆ. 
ಊತಕಗಳಿಂದ ಬೇರ್ಪಡಿಸಿದ ಕೊಬ್ಬುಗಳಲ್ಲಿ ಅಲ್ಪಪ್ರಮಾಣದ ಫಾಸ್ಫೊಲೈಪಿಡ್ಡುಗಳು, ಸ್ಟೆರಾಲುಗಳು, ಂ, ಆ, ಇ  ಜೀವಾತುಗಳು ಮತ್ತು ಕ್ಯಾರೊಟೀನುಗಳು ಇರುತ್ತವೆ.  ಇವುಗಳ ಪೈಕಿ ಕೆಲವು ವಸ್ತುಗಳಿಗೆ ಬೆಳೆವಣಿಗೆಯನ್ನು ನಿಯಂತ್ರಿಸುವ ಸಾಮಥ್ರ್ಯವಿದೆ.  ಇಂಥ ಪೋಷಕವಸ್ತುಗಳ ವಾಹಕವಾಗಿ ಕೊಬ್ಬು ನಮಗೆ ಉಪಕರಿಸುತ್ತಿದೆ.  ಗ್ಲಿಸರೈಡುಗಳಲ್ಲಿ ಅಪರ್ಯಾಪ್ತ ಭಾಗವಿರುವುದರಿಂದಲೇ ಅವು ಜೀರ್ಣ ಹೊಂದಿ ರಕ್ತಗತವಾಗಬಲ್ಲವು ಎಂದು ಭಾವಿಸಲಾಗಿದೆ.  ಶರ್ಕರ ಪಿಷ್ಟಾದಿಗಳು ಇದ್ದರೂ ಸಹ, ಆಹಾರದಲ್ಲಿ ಕೊಬ್ಬು ಇಲ್ಲದಿದ್ದರೆ ಇಲಿಗಳಲ್ಲಿ ಕೊರತೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುವು.  ಪಾದಗಳು ಮತ್ತು ಬಾಲಗಳು ಚಕ್ಕೆಗಟ್ಟಿ ಅವುಗಳಲ್ಲಿ ಹುರುಪೇಳುವುದು.  ಹೀಗಾಗಲು ಅವುಗಳ ಆಹಾರದಲ್ಲಿ ಲಿನೊಲಿಯಿಕ್, ಲಿನೊಲಿನಿಕ್ ಮತ್ತು ಅರ್ಯಾಬಿಡೋನಿಕ್ ಆಮ್ಲಗಳ ಕೊರತೆ ಕಾರಣವೆಂದು ಗೊತ್ತಾಗಿದೆ.  ಮಕ್ಕಳನ್ನು ಬಾಧಿಸುವ ಒಂದು ರೀತಿಯ ಇಸಬುರೋಗಕ್ಕೂ ಈ ಆಮ್ಲಗಳ ಕೊರತೆಗೂ ಸಂಬಂಧ ಕಲ್ಪಿಸುವುದುಂಟು.  ವಿಕಿರಣಶೀಲ ಸಮಸ್ಥಾನಿಗಳಿಂದ ಗುರುತು ಮಾಡಿದ ಸ್ಟಿಯರಿಕ್ ಆಮ್ಲವನ್ನು ಒಳಗೊಂಡ ಆಹಾರವನ್ನು ಪ್ರಾಣಿಗಳಿಗೆ ತಿನ್ನಿಸಿದಾಗ ಅದರ ಒಂದು ಭಾಗ ಓಲಿಯಿಕ್‍ಆಮ್ಲವಾಗಿ ಪರಿವರ್ತಿತವಾಗುವುದು ತಿಳಿದಿದೆ.  ಇದರಿಂದ ಪ್ರಾಣಿಶರೀರ ಓಲಿಯಿಕ್ ಆಮ್ಲವನ್ನು ಸ್ವತಃಸಂಯೋಜಿಸಬಲ್ಲುದು ಎಂದು ಗೊತ್ತಾಗುತ್ತದೆ.  ಆದರೆ ಹೀಗೆಯೇ ಸಮಸ್ಥಾನಿಗಳಿಂದ ಗುರುತು ಹಬ್ಬಿದ ಕೊಬ್ಬಿನ ಆಮ್ಲಗಳಿಂದ ದೇಹ ಲಿಸೊಲಿಯಿಕ್, ಲಿನೊಲಿಯಿಕ್ ಮತ್ತು ಅರ್ಯಾಬಿಡೋನಿಕಾಮ್ಲಗಳನ್ನು ಮಾಡಿಕೊಂಡುದು ವ್ಯಕ್ತವಾಗಿಲ್ಲ.  ಅಂದರೆ ನಮ್ಮ ಆಹಾರದ ಮೂಲಕ ಅವು ಒದಗಿದ ಹೊರತು ಕೊರತೆ ರೋಗಗಳು ಅನಿವಾರ್ಯ ಆದ್ದರಿಂದ ಈ ಮೂರು ಆಮ್ಲಗಳು ಅಗತ್ಯ ಕೊಬ್ಬಿನ ಆಮ್ಲಗಳು ಎನಿಸಿಕೊಂಡಿವೆ. 
ಆಹಾರ ಜಠರದಲ್ಲಿರುವವರೆಗೂ ನಮಗೆ ಹಸಿವು ತೋರುವುದಿಲ್ಲ.  ಆಹಾರದಲ್ಲಿರುವ ಕೊಬ್ಬು ಈ ಕಾಲಾವಧಿಯನ್ನು ಹೆಚ್ಚಿಸುತ್ತದೆ.  ಅದರಿಂದ ನಮಗೆ ತೃಪ್ತಿಯ ಭಾವನೆ ಹೆಚ್ಚು ಕಾಲ ಉಳಿಯುತ್ತದೆ. 
ಜೀವಿಗಳಲ್ಲಿ ಕೊಬ್ಬುಗಳ ಸಂಯೋಜನೆ ಮತ್ತು ವಿನಿಯೋಗ : ಪಕ್ವವಾಗುವ ಕೊನೆಯ ಹಂತದಲ್ಲಿ ಬೀಜ ಮತ್ತು ಹಣ್ಣುಗಳಲ್ಲಿ ಕೊಬ್ಬು ರೂಪುಗೊಳ್ಳುತ್ತದೆ.  ಅಪಕ್ವಸ್ಥಿತಿಯಲ್ಲಿ ಅವುಗಳಲ್ಲಿ ಶರ್ಕರ ಪಿಷ್ಟಾದಿಗಳು ಅಧಿಕವಾಗಿರುತ್ತವೆ.  ಕಿಣ್ವಗಳು ಶರ್ಕರ ಪಿಷ್ಟಾದಿಗಳನ್ನು ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಿಗಾಗಿ ಪರಿವರ್ತಿಸುವುವು.  ಅನಂತರ ಅವು ಕೂಡುವುದರಿಂದ ಗ್ಲಿಸರೈಡುಗಳು ಹುಟ್ಟುವುವು.  ಶರ್ಕರ ಪಿಷ್ಟಾದಿಗಳಿಂದ ಕೊಬ್ಬು ಉಂಟಾಗುತ್ತದೆ ಎಂಬ ಸಿದ್ಧಾಂತಕ್ಕೆ ವಿಕಿರಣಶೀಲ ಸಮಸ್ಥಾನಿಗಳ ನೆರವಿನಿಂದ ನಡೆಸಿದ ಪ್ರಯೋಗಗಳು ಬೆಂಬಲ ನೀಡುತ್ತವೆ.  ವಿಕಿರಣಶೀಲ ಸಮಸ್ಥಾನಿಗಳಿರುವ ಅಸಿಟೇಟ್‍ಯುಕ್ತ ಆಹಾರವನ್ನು ಪ್ರಾಣಿಗಳಿಗೆ ಒದಗಿಸಿದಾಗ ಅವುಗಳ ಊತಕಗಳಲ್ಲಿ ಅಸಿಟೇಟು ಕೊಬ್ಬಿನ ಆಮ್ಲಗಳಿಗೆ ಮಾರ್ಪಡುವುದು ಕಂಡು ಬಂದಿದೆ.  ಕ್ರಿಯೆ ಇನ್ನೂ ಮುಂದುವರಿದು ಅಸಿಟೇಟು ಕೊಲೆಸ್ಟೆರಾಲ್ ಆಗುವುದೂ ವ್ಯಕ್ತವಾಗಿದೆ. 
ನೈಸರ್ಗಿಕ ಕೊಬ್ಬುಗಳಲ್ಲಿರುವ ಆಮ್ಲಗಳಲ್ಲೆಲ್ಲ ಸಮಸಂಖ್ಯೆಯ ಇಂಗಾಲದ ಪರಮಾಣುಗಳಿರುವುದು ಗಮನಾರ್ಹ.  ಅದರಲ್ಲೂ 18 ಇಂಗಾಲದ ಪರಮಾಣುಗಳಿರುವ ಆಮ್ಲಗಳೇ ಹೆಚ್ಚಾಗಿರುವುದು ಮತ್ತೊಂದು ವೈಶಿಷ್ಟ್ಯ. ಆದ್ದರಿಂದ ಮೂರು ಗ್ಲೂಕೋಸ್ (ಅ6ಊ12ಔ6)ಅಣುಗಳಿಂದ ಅಥವಾ ಪಾಲಿಸ್ಯಾಕರೈಡುಗಳ ಅ18 ಚೌಕಟ್ಟಿನಿಂದ ಕೊಬ್ಬು ಆಗಿರಬಹುದೆಂದು ಒಮ್ಮೆ ಭಾವಿಸಲಾಗಿತ್ತು.  ಆದರೆ ಎರಡು ಇಂಗಾಲದ ಪರಮಾಣುಗಳಿರುವ ಅಸಿಟೇಟ್ ಘಟಕಗಳಿಂದ ಕೊಬ್ಬು ಆಗಿರುವುದು ಹೆಚ್ಚು ಸಂಭವನೀಯ.  ಸಸಾರಜನಕಗಳು ಅಥವಾ ಶರ್ಕತ ಪಿಷ್ಟಾದಿಗಳ ಉತ್ಕರ್ಷಣದಿಂದ ಅಸಿಟೇಟ್ ಆಗಬಹುದಾದ್ದರಿಂದ ಈ ಸಿದ್ಧಾಂತ ಆರ್ಕಷಕವಾಗಿದೆ.  ಪ್ರಾಯಶಃ ಪಿತ್ತಜನಕಾಂಗದಲ್ಲಿ ಹೈಡ್ರೊಜನ್ ಸಂಯೋಗ ಮತ್ತು ವಿಯೋಗದ ಹಲವು ಕ್ರಿಯೆಗಳ ಫಲವಾಗಿ ಅಸಿಟೇಟಿನಿಂದಾದ ಕೊಬ್ಬುಗಳಲ್ಲಿ ದ್ವಿಬಂಧಗಳು ಮೂಡುವುವು.  ಮುಂದೆ ಇತರ ಊತಕಗಳಲ್ಲಿ ಉತ್ಕರ್ಷಿತವಾಗಲು ಇದು ಅನುಕೂಲ. 
ಸಂಗ್ರಹಿತ ಕೊಬ್ಬನ್ನು ಸಸ್ಯ ಭ್ರೂಣಗಳು ಹೇಗೆ ಬಳಸಿಕೊಳ್ಳುವುವು ಎಂಬುದು 1960 ರ ವರೆಗೆ ಪೂರ್ತಿಯಾಗಿ ವಿವರಿಸಲ್ಪಟ್ಟಿರಲಿಲ್ಲ.  ಮೊಳೆಯುತ್ತಿರುವ ಭ್ರೂಣಗಳಲ್ಲಿ ಕಿಣ್ವಗಳು ಕೊಬ್ಬನ್ನು ಜಲವಿಶ್ಲೇಷಣೆಗೊಳಿಸಿ ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಾಗಿ ಪರಿವರ್ತಿಸುವುವು ಎಂದು ಈಗ ಗೊತ್ತಾಗಿದೆ.  ಇವು ಎರಡು ಅಥವಾ ನಾಲ್ಕು ಇಂಗಾಲದ ಪರಿಮಾಣುಗಳನ್ನು ಒಳಗೊಂಡ ಉತ್ಕರ್ಷಣ ವಿಧಿಗಳ ಮೂಲಕ ಅಂತಿಮವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರಾಗಿ ಹೋಗುತ್ತವೆ. 
ಪ್ರಾಣಿಗಳ ಆಹಾರ ಪಚನ ಪಥದಲ್ಲಿ ಲೈಪೇಸ್ ಎಂಬ ಕಿಣ್ವವಿರುವ ಪಚನಕಾರಿ ರಸಗಳಿರುತ್ತವೆ.  ಇವು ಗ್ಲಿಸರೈಡುಗಳನ್ನು ಭಾಗಶಃ ಜಲವಿಶ್ಲೇಷಣೆ ಮಾಡಿ, ಎಮಲ್ಷನ್ ಸ್ಥಿತಿಗೆ ಬರುವುವು.  ಉತ್ಪತ್ತಿಯಾದ ಗ್ಲಿಸರಾಲ್, ಕೊಬ್ಬಿನ ಆಮ್ಲಗಳು, ಉಳಿದ ಗ್ಲಿಸರೈಡುಗಳು ಮತ್ತು ಭಾಗಶಃ ಗ್ಲಿಸರೈಡುಗಳು , ಕರುಳಿನ ಪೊರೆಯ ಮೂಲಕ ಹೀರಲ್ಪಡುವುವು; ಮತ್ತೆ ಭಾಗಶಃ ಪುನಃ ಸಂಯೋಜಿಸಿ ಗ್ಲಿಸರೈಡುಗಳು ಮತ್ತು ಫಾಸ್ಫೊಲೈಪಿಡ್ಡುಗಳಾಗುವುವು.  ಸೂಕ್ಷ್ಮ ಹನಿಗಳಾಗಿ ರಕ್ತದಲ್ಲಿ ಸೇರಿ, ಸಂಗ್ರಹ ಅಥವಾ ವಿನಿಯೋಗ ಕ್ಷೇತ್ರಗಳಿಗೆ ರವಾನೆಯಾಗುವುವು. 
ಒಂದು ಪ್ರಾಣಿಯಲ್ಲಿರುವ ಕೊಬ್ಬಿನ ಗುಣ ಆ ಪ್ರಾಣಿ ಸೇವಿಸಿದ ಆಹಾರದಲ್ಲಿದ್ದ ಕೊಬ್ಬಿನ ಗುಣವನ್ನು ಅವಲಂಬಿಸಿದೆ.  ಉದಾಹರಣೆಗೆ ಕಾಡ್ ಲಿವರ್ ಎಣ್ಣೆಯಿರುವ ಆಹಾರ ತಿಂದ ಹಂದಿಯ ಕೊಬ್ಬು ಮೃದುವಾಗಿಯೂ ಕೊಬ್ಬರಿ ಎಣ್ಣೆಯಿರುವ ಆಹಾರವನ್ನು ಒದಗಿಸಿದ ಹಸುವಿನ ಹಾಲಿನ ಕೊಬ್ಬು ಅದಕ್ಕೆ ಅನುಗುಣವಾಗಿಯೂ ಇರುತ್ತದೆ.  ಆದ್ದರಿಂದ ಪ್ರಾಣಿಗಳ ಕೊಬ್ಬು ಕಿಣ್ವಗಳ ಸಹಾಯದಿಂದ ಸಂಯೋಜಿತವಾಗಿರಬಹುದು; ಅಥವಾ ಆಹಾರದಿಂದ ರೂಪಿತವಾಗಿರಬಹುದು.  ಪರಿಣಾಮವಾಗಿ ಪ್ರಾಣಿಗಳ ಕೊಬ್ಬಿನಲ್ಲಿ ಈ ಎರಡು ಅಂಶಗಳೂ ಕೂಡಿರಬಹುದು.  ಪ್ರಾಣಿದೇಹದಲ್ಲಿ ಸಂಯೋಜಿತವಾದ ಕೊಬ್ಬು ಅದರ ಜಾತಿಯನ್ನು ಅವಲಂಬಿಸಿದ್ದರೆ ಆಹಾರದಿಂದ ಪುನರ್ರೂಪಿತವಾದ ಕೊಬ್ಬು ಅದಕ್ಕೆ ಅನುಗುಣವಾಗಿರುವುದು ಸ್ವಾಭಾವಿಕ. 
ಮಾನವದೇಹದಲ್ಲಿ ಕೊಬ್ಬಿನ ಪಚನ ಮತ್ತು ವಿನಿಯೋಗ : ನಮ್ಮ ಆಹಾರದಲ್ಲಿರುವ ಕೊಬ್ಬು ಬಾಯಿಯಲ್ಲಿ ವಿಭಜಿಸುವುದಿಲ್ಲ. ಲಾಲಾರಸ ಈ ಕೆಲಸ ಮಾಡಲಾರದು.  ಸ್ವಲ್ಪಮಟ್ಟಿಗೆ ಜಠರರಸ  ಈ ಕಾರ್ಯ ನಿರ್ವಹಿಸುತ್ತದೆ.  ಸಣ್ಣಕರುಳಿನ ರಸಕ್ಕೆ ಕ್ಷಾರೀಯ ಸನ್ನಿವೇಶ ಅಗತ್ಯ.  ಆದ್ದರಿಂದ ಇಲ್ಲಿ ಗಣನೀಯ ಪ್ರಮಾಣದ ಕೊಬ್ಬು, ಅದರ ಆಮ್ಲ ಮತ್ತು ಗ್ಲಿಸರಾಲುಗಳಿಗೆ ಜಲವಿಶ್ಲೇಷಣೆಯಾಗುತ್ತದೆ.  ಕೊಬ್ಬನ್ನು ಜಲವಿಶ್ಲೇಷಣೆ ಮಾಡುವ ಕಿಣ್ವಗಳಿಗೆ ಲೈಪೇಸುಗಳೆಂದು ಹೆಸರು.  ಮಾನವದೇಹಕ್ಕೆ ಮುಖ್ಯವಾಗಿ ಎರಡು ಲೈಪೇಸುಗಳು ಬೇಕು.  ಮೊದಲನೆಯದು ಸ್ಟೆಪ್ಸಿನ್. ಇದು ಮೆದೋಜೀರಕದಲ್ಲಿ ಹುಟ್ಟುತ್ತದೆ.  ಯಕೃತ್ತಿನಲ್ಲಿ (ಲಿವರ್) ಉತ್ಪಾದಿಸಲ್ಪಟ್ಟು ಪಿತ್ತಕೋಶದ (ಗಾಲ್ ಬ್ಲ್ಯಾಡರ್) ದಾಸ್ತಾನಾಗುವ ಕೆಲವು ವಸ್ತುಗಳಿವೆ.  ಇವೇ ಪಿತ್ತಲವಣಗಳು (ಬೈಲ್ ಸಾಲ್ಟ್ಸ್).  ಇವು ಸಾಬೂನಿನಂಥ ವಸ್ತುಗಳಾದ್ದರಿಂದ ಕೊಬ್ಬನ್ನು ಎಮಲ್ಷನ್ ಸ್ಥಿತಿಗೆ ತಂದು ಕರುಳಿನ ರಸದೊಡನೆ ಮಿಳಿತವಾಗುವಂತೆಯೂ ಕರುಳಿನ ಭಿತ್ತಿಗಳಲ್ಲಿ ಕೊಬ್ಬಿನೊಡನೆ ವರ್ತಿಸಬಲ್ಲ ಎರಡನೆಯ ಮುಖ್ಯ ಕಿಣ್ವ ಉತ್ಪತ್ತಿಯಾಗುವಂತೆಯೂ ಮಾಡುತ್ತವೆ.  ಜಲವಿಶ್ಲೇಷಣೆಯ ಉತ್ಪನ್ನಗಳಾದ ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳನ್ನು ಕರುಳಿನ ಭಿತ್ತಿಗಳು ಹೀರಿಕೊಳ್ಳುತ್ತವೆ.  ಅವು ಪುನಃ ಸಂಯೋಜಿಸಿ ಕೊಬ್ಬಾಗುತ್ತವೆ.  ಆದರೆ ಮೂಲ ಆಹಾರದಲ್ಲಿದ್ದ ಕೊಬ್ಬೇ ಆಗಬೇಕೆಂಬ ನಿಯಮವಿಲ್ಲ.  ಸಂಯೋಜಿತ ಕೊಬ್ಬುಗಳು ರಕ್ತ ಮತ್ತು ದುಗ್ಧರಸದ (ಲಿಂಫ್) ಮೂಲಕ ದೇಹದ ನಾನಾ ಭಾಗಗಳಿಗೆ ರವಾನೆಯಾಗುತ್ತದೆ.  ಕೊಬ್ಬಿನ ಕೋಠಿಗಳಲ್ಲಿ ಅವು ಸಂಗ್ರಹವಾಗಬಹುದು.  ಹೀಗೆ ಕೂಡಿದ ಕೊಬ್ಬು ನಿಷ್ಕ್ರಿಯವಾಗಿ ಉಳಿಯುವುದಿಲ್ಲ.  ಅವ್ಯಾಹತವಾಗಿ ರೂಪಾಂತರ ಹೊಂದುತ್ತಿರುತ್ತದೆ. 
ಕೊಬ್ಬುಗಳ ಉತ್ಕರ್ಷಣ : 	ದೇಹದಲ್ಲಿ ಕೊಬ್ಬುಗಳು ಇಂಗಾಲದ ಡೈಆಕ್ಸೈಡ್ ಮತ್ತು ನೀರಿಗೆ ಉತ್ಕರ್ಷಿತವಾಗಿ ಶಕ್ತಿನೀಡುತ್ತವೆ.  ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಿಗೆ ಜಲವಿಶ್ಲೇಷಿತವಾಗುವುದು ಮೊದಲ ಹಂತ.  ಮುಂದೆ ಇವು ಉತ್ಕರ್ಷಣ ಹೊಂದುತ್ತವೆ.  ಯಕೃತ್ತಿನಲ್ಲಿ ಗ್ಲಿಸರಾಲು ಗ್ಲೈಕೊಜನ್ನಾಗಿ ಪರಿವರ್ತಿತವಾಗಬಹುದು.  ಇಲ್ಲವೇ ಶರ್ಕರ ಪಿಷ್ಟಾದಿಗಳಂತೆ ಮಧ್ಯವರ್ತಿಗಳ ಮೂಲಕ ಉತ್ಕರ್ಷಣ ಹೊಂದಬಹುದು. 
ಬೀಟಾ ಉತ್ಕರ್ಷಣ (ನೂಪ್) : ಕೊಬ್ಬಿನ ವಿನಿಯೋಗ ಮುಖ್ಯವಾಗಿ ಅದರಲ್ಲಿರುವ ಆಮ್ಲಗಳ ವಿನಿಯೋಗಕ್ಕೆ ಸಂಬಂಧಿಸಿದೆ.  ಇವು ಪಿತ್ತಜನಕಾಂಗ ಮತ್ತು ಇತರ ಊತಕಗಳಲ್ಲಿ ಉತ್ಕರ್ಷಿತವಾಗುವುವು.  ಈ ಉತ್ಕರ್ಷಣ ವಿಧಿಯಲ್ಲಿ ನಾಲ್ಕು ಹಂತಗಳಿದ್ದು  (ಬೀಟಾ) ಇಂಗಾಲದ ಪರಮಾಣು ಮುಖ್ಯ ಪಾತ್ರವಹಿಸುತ್ತದೆ.  ಎರಡು ಇಂಗಾಲದ ಪರಮಾಣುಗಳಿರುವ ಅಸಿಟಿಕ್ ಆಮ್ಲ ಹಂತ ಹಂತವಾಗಿ ತೆಗೆಯಲ್ಪಡುತ್ತದೆ. 
1 ಮೊದಲನೆಯ ಹಂತದಲ್ಲಿ  ಸ್ಥಾನಗಳಿಂದ ಹೈಡ್ರೊಜನ್ ತೆಗೆಯಲ್ಪಟ್ಟು  ಅಪರ್ಯಾಪ್ತ ಆಮ್ಲ ಉಂಟಾಗುತ್ತದೆ.      
ಮೇಲ್ಕಂಡ ಕ್ರಿಯೆಗಳು ಪುನರಾವರ್ತನ ಕ್ರಮದಲ್ಲಿ ನಡೆದು ಪ್ರತಿಯೊಂದು ಸಲವೂ ಎರಡು ಇಂಗಾಲದ ಪರಮಾಣುಗಳು ಅಸಿಟಿಕ್ ಆಮ್ಲದ ರೂಪದಲ್ಲಿ ಕಳೆಯುತ್ತ ಹೋಗುವುವು.  ನೀಳವಾದ ಕೊಬ್ಬಿನ ಆಮ್ಲದ ಸರಣಿ ತುಂಡಾಗುತ್ತ ಬರುವುದು.  ಒಂದೊಂದು ಶ್ರೇಣಿಯಲ್ಲಿ ಉತ್ಪತ್ತಿಯಾದ ಅಸಿಟಿಕ್ ಆಮ್ಲವೂ ಅಸಿಟೈಲ್ ಸಹಕಿಣ್ವ ಂ ರೂಪದಲ್ಲಿ ಕ್ರಬ್ಸ್ ಚಕ್ರವನ್ನು ಪ್ರವೇಶಿಸಿ ಅಂತಿಮವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ನೀರಿಗೆ ಉತ್ಕರ್ಷಿತವಾಗುವುದು. 
		ಅಊ3ಅಔಔಊ2ಅಔ2+2ಊ2ಔ
ಕೊಬ್ಬಿನ ಆಮ್ಲಗಳಲ್ಲಿ ಸಮ ಸಂಖ್ಯೆಯ ಇಂಗಾಲದ ಪರಮಾಣುಗಳು ಇರುವುವಷ್ಟೆ.  ಹೀಗಾಗಿ ಅಂತ್ಯಪೂರ್ವಘಟ್ಟದಲ್ಲಿ ನಾಲ್ಕು ಇಂಗಾಲದ ಪರಮಾಣುಗಳಿರುವ ಬ್ಯುಟರಿಕ್ ಆಮ್ಲ ಪ್ರಾಪ್ತವಾಗುವುದು.  ಅದು ಪುನಃ ಮೇಲ್ಕಂಡ ನಾಲ್ಕು ಹಂತದ ಕ್ರಿಯೆಗೆ ಒಳಗಾಗುವುದು. 
ಅಊ3.ಅಊ2.ಅಊ2.ಅಔಔಊಅಊ3-ಅಊ=ಅಊ-ಅಔಔಊ

ಊ1ಔ

ಅಊ3-ಅಊ-ಅಊ2-ಅಔಔಊ
|
	ಅಊ3-ಅ-ಅಊ2-ಅಔಔಊಔಊ
	||	ಬೀಟಾಹೈಡ್ರಾಕ್ಸಿ ಬ್ಯೂಟರಿಕ್ ಆಮ್ಲ
	ಔ
	ಅಸಿಟೊ ಅಸಿಟಿಕ್ ಆಮ್ಲ.

	ಊ2ಔ

	ಅಊ3.ಅಔ.ಅಊ3
ಅಸಿಟೋನ್

ಮಧುಮೇಹ ರೋಗಸ್ಥಿತಿಯಲ್ಲಿ ಪಿತ್ತಜನಕಾಂಗಕ್ಕೆ ಅದರ ಶಕ್ತಿಮೂಲವಾದ ಶರ್ಕರ ಪಿಷ್ಟಾದಿಗಳು ಒದಗದೆ ಸೊರಗುವುದು.   ಆಗ ದೇಹ ಕೊಬ್ಬನ್ನು ಉತ್ಕರ್ಷಿಸಿ ಅಗತ್ಯಶಕ್ತಿಯನ್ನು ಪಡೆಯಲು ಹವಣಿಸುತ್ತದೆ.  ಈ ಸಂದರ್ಭದಲ್ಲಿ ಬೀಟಾ ಹೈಡ್ರಾಕ್ಸಿ ಬ್ಯುಟರಿಕ್ ಆಮ್ಲ ಅಸಿಟೋ ಅಸಿಟಿಕ್‍ಆಮ್ಲ ಮತ್ತು ಅಸಿಟೋನುಗಳು (ಇವುಗಳಿಗೆ ಅಸಿಟೋನ್ ಕಾಯಗಳು ಎನ್ನುತ್ತಾರೆ)  ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ರೋಗಿಯ ಮೂತ್ರದಲ್ಲಿ ವಿಸರ್ಜಿಸಲ್ಪಡುವುವು.  ರೋಗಿಯ ಉಸಿರಿನಲ್ಲೂ ಅಸಿಟೋನಿನ ಮಧುರವಾಸನೆ ಹತ್ತುವುದು.  ಕೊಬ್ಬಿನ ಆಮ್ಲಗಳ ಬೀಟಾ ಉತ್ಕರ್ಷಣ ಸಿದ್ಧಾಂತಕ್ಕೆ ಇದೊಂದು ಸಾಕ್ಷಿಯಾಗಿದೆ. 
ಕೀಟೋಸಿಸ್ : 	ಆರೋಗ್ಯಸ್ಥಿತಿಯಲ್ಲೂ ಅಲ್ಪ ಪ್ರಮಾಣ ಅಸಿಟೋನ್ ಕಾಯಗಳು ಮೂತ್ರದಲ್ಲಿರಬಹುದು.  ಆಹಾರದಲ್ಲಿ ಕೊಬ್ಬು ಹೆಚ್ಚಾಗಿದ್ದರೆ ಅಥವಾ ಮಧುಮೇಹ ರೋಗವಿದ್ದಾಗ ಅವುಗಳ ಅಂಶ ಗಣನೀಯವಾಗಿ ಏರುವುದು.  ಮಾಂಸಖಂಡಗಳ ಊತಕಗಳಲ್ಲಿ, ಅವು ಸಾಮಾನ್ಯವಾಗಿ ವಿನಿಯೋಗವಾಗುವುವು.  ಆದರೆ ನೂತನ ಪರಿಸ್ಥಿತಿಯಲ್ಲಿ ಮಾಂಸಖಂಡಗಳು ಹೆಚ್ಚುವರಿ ಅಸಿಟೋನ್ ಕಾಯಗಳನ್ನು ಉಪಯೋಗಿಸಿಕೊಳ್ಳಲಾರದೆ ಉಳಿಸಿಬಿಡುವುವು.  ಅವು ರಕ್ತಗತವಾಗಿ ಕೀಟೋಸಿಸ್ ರೋಗ ಪ್ರಾಪ್ತವಾಗುವುದು.  ಅಸಿಟೊ ಅಸಿಟಿಕ್ ಮತ್ತು ಬೀಟಾ ಹೈಡ್ರಾಕ್ಸಿಬ್ಯುಟಿರಿಕ್ ಆಮ್ಲಗಳನ್ನು ಲವಣಗಳ ರೂಪದಲ್ಲಿ ಹೊರದೂಡಲು ದೇಹ ಯತ್ನಿಸುವುದು.  ಇದಕ್ಕಾಗಿ ದೇಹದ ಎಲ್ಲ ಭಾಗಗಳಿಂದ ಕ್ಷಾರಾಂಶ ಬಳಸಲ್ಪಡುವುದು.  ಪರಿಣಾಮವಾಗಿ ರಕ್ತದ ಕ್ಷಾರೀಯತೆ ತಗ್ಗಿ ಆಮ್ಲೀಯತೆ (ಆಸಿಡೋಸಿಸ್) ಎಂಬ ಸ್ಥಿತಿ ಏರ್ಪಡುವುದು. 
ಹೀಗೆ ಕೊಬ್ಬಿನ ಆಮ್ಲದ ಭಾಗ ಕೀಟೋನ್ ಕಾಯಗಳ ಜನಕನಾದರೆ ಗ್ಲಿಸರಾಲ್ ಭಾಗ (ಟ್ರಯೋಸ್) ಶರ್ಕರ ಪಿಷ್ಟಾದಿಗಳಂತೆ ವರ್ತಿಸಿ ಅವುಗಳ ಜನನವನ್ನು ವಿರೋಧಿಸುವುದು.  ಒಟ್ಟಿನಲ್ಲಿ ರಕ್ತದ ಕ್ಷಾರೀಯತೆಗೆ ಧಕ್ಕೆ ಬರುವುದಿಲ್ಲ. 
ಮೇಣಗಳು : 	ಎಣ್ಣೆ ಎಂಬ ಪದದಂತೆ ಇದು ಸಹ ಅನಿಶ್ಚಯ ಅರ್ಥವುಳ್ಳ ಪದ.  ರಾಸಾಯನಿಕ ದೃಷ್ಟಿಯಿಂದ ಇವೂ ಎಸ್ಟರುಗಳು.  24-36 ಇಂಗಾಲದ ಪರಮಾಣುಗಳಿರುವ ನೀಳ ಸರಣಿ ಆಮ್ಲಗಳೂ 16-36 ಇಂಗಾಲದ ಪರಮಾಣುಗಳಿರುವ ನೀಳ ಸರಣಿ ಮಾನೊಹೈಡ್ರಿಕ್ ಆಲ್ಕೊಹಾಲುಗಳೂ ಪಾಲ್ಗೊಂಡಿರುತ್ತವೆ.  ವ್ಯಾವಹಾರಿಕವಾಗಿ ಮುಟ್ಟಿದರೆ ಜಾರುವ ಸ್ಪರ್ಶಭಾವವುಳ್ಳ ಮತ್ತು ಸುಲಭವಾಗಿ ದ್ರವಿಸುವ ವಸ್ತುಗಳಿಗೆ ಮೇಣಗಳೆಂದು ಹೆಸರು.  ಹೀಗಾಗಿ ಎಸ್ಟರುಗಳಲ್ಲದ ಕೆಲವು ವಸ್ತುಗಳೂ ವಾಸ್ತವಾಗಿ ಕೊಬ್ಬಾಗಿರುವ ವಸ್ತುಗಳೂ ಮೇಣಗಳೆಂದು ಕರೆಯಲ್ಪಡುತ್ತಿವೆ.  ಉದಾಹರಣೆಗೆ, ಪ್ಯಾರಫಿನ್ ಮೇಣ ಹೈಡ್ರೊಕಾರ್ಬನ್ನುಗಳ ಮಿಶ್ರಣ.  ಕಾರ್ಬೊ ಮೇಣ ಸಂಯೋಜಿತ ಪಾಲಿ ಈಥರ್.  ಜಪಾನ್ ಮೇಣ ಒಂದು ಕೊಬ್ಬು.  ಜೇನು ಮೇಣ ಮಾತ್ರ ನಿಜವಾದ ಮೇಣ. ಅದು ಪ್ರಧಾನವಾಗಿ ಮಿರಿಸಿಲ್ ಪಾಮಿಟೇಟ್ ಅದರ ಅಣುಸೂತ್ರ ಅ15ಊ31. ಅಔಔಅ31ಊ63  ನೈಸರ್ಗಿಕ ಮೇಣಗಳಲ್ಲಿರುವ ಆಲ್ಕೊಹಾಲುಗಳು ಮತ್ತು ಆಮ್ಲಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. 

ಹೆಸರು
ಸೂತ್ರ
ಮೇಣ

ಪಾಮಿಟಿಕ್ ಆಮ್ಲ

ಅ15ಊ31.ಅಔಔಊ
ಜೇನು ಮೇಣ, ಜಪಾನ್ ಮೇಣ ತಿಮಿಗೊಬ್ಬು (ಸ್ಪರ್ಮಸೆಟಿ)

ಸೆರೋಟಿಕ್ ಆಮ್ಲ
ಅ25ಊ51.ಅಔಔಊ
ಜೇನು ಮೇಣ, ಕಾರ್ನೌಬ, ಮಾಂಟನ್ ಮೇಣ

ಮೆಲಿಸಿಕ್ ಆಮ್ಲ
ಅ28ಊ57.ಅಔಔಊ
ಜೇನುಮೇಣ, ಮಾಂಟನ್ ಮೇಣ

ಸೀಟೈಲ್ ಆಲ್ಕೊಹಾಲ್
ಅ16ಊ33.ಔಊ
ತಿಮಿಗೊಬ್ಬು, ಕಡಲಹಂದಿ ಎಣ್ಣೆ

ಆಕ್ಟಡೆಕೈಲ್ ಆಲ್ಕೊಹಾಲ್
ಅ18ಊ37.ಔಊ
ತಿಮಿಗೊಬ್ಬು

ಓಲಿಯಲ್ ಆಲ್ಕೊಹಾಲ್
ಅ18ಊ35.ಔಊ
ತಿಮಿಗೊಬ್ಬು, ಕಡಲಹಂದಿ ಎಣ್ಣೆ

ಸೀರೈಲ್ ಆಲ್ಕೊಹಾಲ್
ಅ26ಊ53.ಔಊ
ಕೀಟ ಮೇಣ

ಮಿರಿಸಿಲ್ ಆಲ್ಕೊಹಾಲ್
ಅ31ಊ63.ಔಊ
ಜೇನುಮೇಣ, ಕಾರ್ನಾಬ ಮೇಣ

ಕೊಲೆಸ್ಟೆರಾಲ್
-
ಉಣ್ಣೆಯ ಮೇಣ

ಮೇಣಗಳು ಜೀವಕೋಶದ ಅಂಗಾಂಶವಾಗಿರುವುದು ವಿರಳ.  ಬದಲು ಎಲೆಗಳ ಹೊರಪದರದಲ್ಲಿ ಮತ್ತು ಹಣ್ಣುಗಳ ಮೇಲಿದ್ದುಕೊಂಡು, ಅವುಗಳಿಗೆ ರಕ್ಷಾಕವಚವಾಗಿ ಕಾಪಾಡುವುವು.  ಕೊಬ್ಬುಗಳನ್ನು ಸಾಬೂನೀಕರಿಸುವಷ್ಟು ಸುಲಭವಾಗಿ ಮೇಣಗಳನ್ನು ಜಲವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ.  ಅವುಗಳ ದ್ರವೀಕರಣ ಬಿಂದುಗಳು 35ಲಿ-100ಲಿ ಸೆಂ.ಗ್ರೇ. ಉಷ್ಣತಾ ಮಿತಿಯಲ್ಲಿರುವುದರಿಂದ ಸುಭದ್ರವಾದ ಮತ್ತು ಮಿರುಗುವ ಪೊರೆಗಳನ್ನು ನೀಡಬಲ್ಲವು.  ಆದ್ದರಿಂದ ಅನೇಕ ಬಗೆಯ ಮೆರಗುಗಳಲ್ಲಿ ಅವು ಉಪಯೋಗಿಸಲ್ಪಡುತ್ತಿವೆ.  ಇತರ ಭೌತಗುಣಗಳಲ್ಲಿ ಅವು ಕೊಬ್ಬನ್ನು ಹೋಲುತ್ತವೆ.   ಕೊಬ್ಬುಗಳು ಲೀನವಾಗುವ ದ್ರವಗಳಲ್ಲೇ ಇವೂ ಲೀನವಾಗುತ್ತವೆ.  ಕಾಗದದ ಮೇಲೆ ಜಿಡ್ಡಿನ ಗುರುತು ಬಿಡುತ್ತವೆ. 

ಮೇಣಗಳಲ್ಲಿರುವ ಕೊಬ್ಬಿನ ಆಮ್ಲಗಳು ಬಲುಪಾಲು ಪರ್ಯಾಪ್ತವಾದುವು.  ಲಾರಿಕ್ ಆಮ್ಲದಿಂದ ಹಿಡಿದು ಆಕ್ಟಟ್ರೈ ಅಕಾಂಡನೋಯಿಕ್ ಆಮ್ಲದ ವರೆಗೆ (ಅ37ಊ75.ಅಔಔಊ) ಇರುವುದುಂಟು.  ಅಟಿಊ2ಟಿ+1ಔಊ ಶ್ರೇಣಿಯ ಅ12-ಅ36 ಪರ್ಯಾಪ್ತ ಆಲ್ಕೊಹಾಲುಗಳು ಮೇಣಗಳಲ್ಲಿರುವುದನ್ನು ಗುರುತಿಸಲಾಗಿದೆ.  ಉಣ್ಣೆಯ ಮೇಣದಲ್ಲಿರುವಂತೆ ಕೊಲೆಸ್ಟರಾಲ್ ಮತ್ತು ಸಂಬಂಧಿಗಳಿರಬಹುದು.  ಪಾಶ್ರ್ವಸರಣಿ ರಚನೆಯುಳ್ಳ ಆಮ್ಲ ಮತ್ತು ಆಲ್ಕೊಹಾಲುಗಳನ್ನು ಕೆಲವು ಮೇಣಗಳಿಂದ ಪಡೆಯಲಾಗಿದೆ.  ಆದರೆ ಈ ಆಲ್ಕೊಹಾಲುಗಳ ಪ್ರಮಾಣ ಅಲ್ಪ. 

ಸಸ್ಯಮೇಣಗಳ ಪೈಕಿ ಕೈಗಾರಿಕಾ ಮಹತ್ತ್ವವಿರುವ ಕಾರ್ನೌಬ ಮೇಣವನ್ನು ಗಣನೀಯ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.  ಬ್ರೆಜಿûಲ್ ದೇಶದಲ್ಲಿ ಬೆಳೆಯುವ ಪಾಮ್‍ಗಿಡದ ಎಲೆಗಳಿಂದ ಇದು ದೊರೆಯುತ್ತದೆ.  ಇದು ಬಲುಗಟ್ಟಿ.  ಚೆನ್ನಾಗಿ ಮೆರಗು ಸ್ವೀಕರಿಸುವುದರಿಂದ  ಹೊಳಪು ನೀಡುವ ವಸ್ತುಗಳಲ್ಲಿ ಬಳಕೆಯಾಗುತ್ತದೆ.  ಟೆಕ್ಸಾಸ್ ಮತ್ತು ಮೆಕ್ಸಿಕೋ ದೇಶಗಳಲ್ಲಿ ವ್ಯಾಪಕವಾಗಿ ಬೆಳೆಯುವ ಕ್ಯಾಂಡೆಲಿಲ್ಲ ಸಸ್ಯದಿಂದಲೂ ಇಂಥದೇ ಮೇಣ ದೊರೆಯುತ್ತದೆ.  ಕಬ್ಬಿನ ಜಲ್ಲೆ ಮತ್ತು ಎಲೆಗಳಿಂದಲೂ ಒಂದು ವಿಧವಾದ ಮೇಣ ಸಿಕ್ಕುತ್ತದೆ.  ಇದರಲ್ಲಿ ಅನೇಕ ಕಶ್ಮಲಗಳಿರುವುದರಿಂದ ಕಪ್ಪು ಛಾಯೆ ಹೊಂದಿರುತ್ತದೆ.  ಇದನ್ನೂ ಮೆರಗುಗಳಲ್ಲಿ ಬಳಸುವುದುಂಟು.  ಕ್ಯೂಟಿಕಲ್ ಮೇಣವಿರುವುದರಿಂದಲೇ ಸೇಬಿನ ಹಣ್ಣಿನ ಮೇಲ್ಮೈ ಅಷ್ಟು ನುಣುಪಾಗಿದ್ದು ಹೊಳೆಯುವುದು. 

ಪ್ರಾಣಿಗಳ ಮೇಣದಲ್ಲಿ ಮುಖ್ಯವಾದುದೆಂದರೆ ಜೇನುಮೇಣ.  ಇದು ಸಸ್ಯಮೇಣಗಳಿಗಿಂತ ಮೃದು.  ಆದ್ದರಿಂದ ಮೆರಗುಗಳಲ್ಲಿ ಬಳಸಲು ಯೋಗ್ಯವಲ್ಲ.  ಆದರೆ ತೇವ ನಿರೋಧಕಗಳನ್ನು ಇದರಿಂದ ತಯಾರಿಸಬಹುದು.  ಕುರಿಯ ಉಣ್ಣೆಯನ್ನು ಸಂಸ್ಕರಿಸಿದಾಗ ಬರುವ ಮೇಣವನ್ನು ಶುದ್ಧಮಾಡಿ ಲೇನೊಲಿನ್ ಎಂಬ ಹೆಸರಿನಿಂದ ವೈದ್ಯಕೀಯದಲ್ಲಿ ಮತ್ತು ಅಂಗರಾಗಗಳಲ್ಲಿ ಬಳಸುತ್ತಿದ್ದಾರೆ; ಏಕೆಂದರೆ ಅದು ಬಹು ಬೇಗ ನಮ್ಮ ಚರ್ಮಗತವಾಗುತ್ತದೆ.  ತಿಮಿಗೊಬ್ಬು ಪ್ರಧಾನವಾಗಿ ಕೀಲೆಣ್ಣೆಯಾಗಿ ವಿನಿಯೋಗವಾಗುವುದು.  ಮೇಣಗಳ ಇತರ ಉಪಯೋಗಗಳೆಂದರೆ ಮೋಂಬತ್ತಿಗಳು, ಕಾರ್ಬನ್ ಕಾಗದ ಮತ್ತು ಧ್ವನಿಮುದ್ರಿಕೆ ಮಾಡುವ ತಟ್ಟೆಗಳ ತಯಾರಿಕೆ. 
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ